You are currently viewing ನವೋದಯ ಪ್ರವೇಶ ಪರೀಕ್ಷೆಯ ಅರ್ಜಿ: ಅವಧಿ ವಿಸ್ತರಣೆ, ತಿದ್ದುಪಡಿಗೆ ಅವಕಾಶ

ನವೋದಯ ಪ್ರವೇಶ ಪರೀಕ್ಷೆಯ ಅರ್ಜಿ: ಅವಧಿ ವಿಸ್ತರಣೆ, ತಿದ್ದುಪಡಿಗೆ ಅವಕಾಶ

ಕೊಪ್ಪಳ : ಕುಕನೂರು ಜವಾಹರ ನವೋದಯ ವಿದ್ಯಾಲಯದ 2024-25 ಸಾಲಿನಲ್ಲಿ 6ನೇ ತರಗತಿಯ ಆಯ್ಕೆಗಾಗಿ ಪ್ರವೇಶ ಪರೀಕ್ಷೆಯ ಅರ್ಜಿ ಆಹ್ವಾನಿಸಲಾಗಿದ್ದು, ಅವಧಿಯನ್ನು ಆಗಸ್ಟ್ 25ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ನವೋದಯ ವಿದ್ಯಾಲಯ ಸಮಿತಿಯ ಜಾಲತಾಣ www.navodaya.gov.in ಮುಖಾಂತರ ಸಲ್ಲಿಸಬೇಕು.

ಅರ್ಜಿಯಲ್ಲಿ ತಿದ್ದುಪಡಿಗೆ ಅವಕಾಶ: ಅರ್ಜಿ ಸಲ್ಲಿಸಿದ ಮಾಹಿತಿಯಲ್ಲಿ ಗಂಡು ಅಥವಾ ಹೆಣ್ಣು, ಜಾತಿ ಬದಲಾವಣೆಗಳಾದ ಸಾಮಾನ್ಯ, ಹಿಂದುಳಿದ, ಇತರೆ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಗ್ರಾಮೀಣ ಅಥವಾ ನಗರ, ಅಂಗವಿಕಲತೆ ಮತ್ತು ಪರೀಕ್ಷೆ ಬರೆಯುವ ಮಾಧ್ಯಮದಲ್ಲಿ ಏನಾದರೂ ವ್ಯತ್ಯಾಸವಿದ್ದರೆ ತಿದ್ದುಪಡಿ ಮಾಡಲು ಆಗಸ್ಟ್ 26 ಮತ್ತು 27ರಂದು ಅವಕಾಶ ನಿಗದಿಪಡಿಸಲಾಗಿದೆ ಎಂದು ಕುಕನೂರು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರಾದ ಜಯಾ ಜೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!