LOCAL EXPRESS : ಸೋಲು ಗೆಲುವಿನ ದಾರಿಗೆ ಮುನ್ನಡಿಯಾದರೆ, ಪರಿಶ್ರಮ ಗೆಲುವಿನ ತಳಹದಿ : ಸಿದ್ದಯ್ಯ ಉಳಾಗಡ್ಡಿ

You are currently viewing LOCAL EXPRESS : ಸೋಲು ಗೆಲುವಿನ ದಾರಿಗೆ ಮುನ್ನಡಿಯಾದರೆ, ಪರಿಶ್ರಮ ಗೆಲುವಿನ ತಳಹದಿ : ಸಿದ್ದಯ್ಯ ಉಳಾಗಡ್ಡಿ

ಕುಕನೂರು : “ಒಬ್ಬ ಯಶಸ್ವಿ ವ್ಯಕ್ತಿಯ ಹಿಂದಿನ ಎರಡು ಗುಟ್ಟು, ಸೋಲು ಮತ್ತು ಪರಿಶ್ರಮ, ಸೋಲು ಗೆಲುವಿನ ದಾರಿಗೆ ಮುನ್ನಡಿಯಾದರೆ, ಪರಿಶ್ರಮ ಗೆಲುವಿನ ತಳಹದಿ” ಎಂದು ಕುಕನೂರು ಪಟ್ಟಣ ಪಂಚಾಯತ್ ಸದಸ್ಯ ಸಿದ್ದಯ್ಯ ಉಳಾಗಡ್ಡಿ ಹೇಳಿದರು.

ಪಟ್ಟಣದ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ 2023-24 ನೇ ಸಾಲಿನ ಕುಕನೂರ ಪೂರ್ವ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಅವರು, “ಚಂದ್ರಯಾನ 1, 2, ವಿಫಲತೆಯಿಂದ ಧೃತಿಗೆಡದ ನಿರಂತರ ಅಧ್ಯಯನ ಹಾಗೂ ಪರಿಶ್ರಮದಿಂದ ಇಂದು ಇಸ್ರೋ ವಿಜ್ಞಾನಿಗಳು ಚಂದ್ರಯಾನ-3ರನ್ನು ಉಡಾವಣೆ ಮಾಡಿದ್ದಾರೆ. ವಿಜ್ಞಾನಿಗಳ ಈ ಪರಿಶ್ರಮ ಯಶಸ್ವಿ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ” ಎಂದು ಚಂದ್ರಯಾನದ ನೈಜ ವಿಷಯವನ್ನು ಹೇಳಿ ಕ್ರೀಡಾಪಟುಗಳಿಗೆ ಸ್ಪೂರ್ತಿಯ ಮಾತುಗಳನ್ನಾಡಿದರು.

ಕ್ರೀಡಾ ಜ್ಯೋತಿ ಹಾಗೂ ಧ್ವಜರೋಹಣ ನೆರವೇರಿಸಿದ ನ್ಯಾಯವಾದಿ ಹಾಗೂ ಶಾಲಾ ಸುಧಾರಣಾ ಸಮತಿಯ ಅಧ್ಯಕ್ಷ ಗವಿಸಿದ್ದಪ್ಪ ಅರೇರ ಮಾತನಾಡಿ, “ನಿಮ್ಮ ಗುರಿಯನ್ನು ತಲುಪಲು ಸ್ವತಃ ನಿವೇ ಓಡಲಾರಂಭಿಸಬೇಕು ಪರರನ್ನು ಅವಲಂಭಿಸಿದರೆ, ಗುರಿಯ ದಾರಿ ತಪ್ಪುವ ಸಾಧ್ಯತೆಗಳೇ ಹೆಚ್ಚು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷದ ವಹಿಸಿದ್ದ ಗವಿಸಿದ್ಧೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಎಸ್‌.ಜೆ. ಪಾಟೀಲ್‌ ಮಾತನಾಡಿ, “ಈ ಜಗತ್ತಿನಲ್ಲಿ ಸೋಲದೆ ಗೆದ್ದವರು ಯಾರು ಇಲ್ಲ, ಸೋತು ಗೆದ್ದವರು ಸಾಧಕರೆಲ್ಲ. ಇಂದು ನೀವು ಚನ್ನಾಗಿ ಆಟ ಆಡಿದರೆ ಮುಂದೆ ನೀವು ರಾಜ್ಯ ಮಟ್ಟದವರಿಗೆ ಸ್ಫರ್ಧೆ ಮಾಡಬಹುದು ಜೊತೆಗೆ ಅಲ್ಲಿಯೂ ಸಹ ಗೆದ್ದು ಮಹಾನ್‌ ಸಾಧಕರಾಗಬಹುದು, ಇದರಿಂದ ಸರ್ಕಾರ ಉದ್ಯೋಗದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ದೈಹಿಕ ಶಿಕ್ಷಕ ಆರ್‌. ಡಿ. ರಾಠೋಡ್‌ ಅವರು ಕ್ರೀಡಾಕೂಟದ ಪ್ರತಿಜ್ಞಾ ವಿಧಿ ಭೋಧನೆ ಮಾಡಿದರು. ಬಳಿಕ ಶಾಲಾ ಕ್ರೀಡಾಕೂಟಕ್ಕೆ ದೇಣಿಗೆ ನೀಡಿದ ಸಹೃದಯಿ ಧಾನಿಗಳಿಗೆ ಶಾಲಾ ಆಡಳಿತ ಮಂಡಳಿಯಿಂದ ಸ್ಮಾನಿಸಿದರು. ಶಿಕ್ಷಕರಾದ ಶರಣಪ್ಪ ಗುಡ್ಲಾನೂರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಡಿ.ಡಿ. ಜೋಗಣ್ಣನವರ್‌ ವಿ.ಆರ್‌. ಹಿರೇಮಠ, ವಿ.ಬಿ. ಕಟ್ಟಿ, ಬಿ.ವಿ. ಲಕ್ಷಾಣಿ, ಗವಿಸಿದ್ದಪ್ಪ ಕರಮುಡಿ, ಎಸ್‌ ಎಂ ಹಿರೇಮಠ, ಬಿ.ಎಸ್‌. ಅರಳೆಲೆ ಮಠ, ತಾಲೂಕಿನ ಎಲ್ಲಾ ಶಾಲೆಯ ದೈಹಿಕ ಶಿಕ್ಷಕರು ಹಾಗೂ 7 ಶಾಲೆಯ ಕ್ರೀಡಾ ಪಟುಗಳು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.

Leave a Reply

error: Content is protected !!