You are currently viewing ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯ : ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್

ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯ : ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್

ಕುಕನೂರು : “ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯ. ಅದರ ತಿಳುವಳಿಕೆ ಹೊಂದಿ ಸಮಾಜದಲ್ಲಿ ಶಾಂತಿ ಪ್ರೀತಿಯಿಂದ ಜೀವನ ನಡೆಸಬೇಕಾದರೆ ಪ್ರತಿಯೊಬ್ಬರು ಕಾನೂನನ್ನು ತಿಳಿದುಕೊಳ್ಳಬೇಕು” ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಅಭಿಪ್ರಾಯ ಪಟ್ಟರು.

ತಾಲೂಕಿನ ಮಸಬಹಂಚಿನಾಳ ಶ್ರೀಮತಿ ಗೌರಮ್ಮ ಬಸಪ್ಪ ಆಚಾರ್ ಸರಕಾರಿ ಪ್ರೌಢಶಾಲೆಯಲ್ಲಿ ನಿನ್ನೆ (ಆಗಸ್ಟ್ 22 ಮಂಗಳವಾರ) ನಡೆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಯಲಬುರ್ಗಾ, ‘ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ’ವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀ ದೇವೇಂದ್ರ ಪಂಡಿತ್ ಉದ್ಘಾಟಿಸಿ ಬಳಿಕ ಮಾತನಾಡಿ, “ನಮ್ಮ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಶಾಲಾ ಮಕ್ಕಳಿಗೆ ಮತ್ತು ಸಮಾಜದ ತುಳಿತಕ್ಕೆ ಒಳಗಾದ ಜನಾಂಗಕ್ಕೆ ಪ್ರತಿಯೊಬ್ಬರು ತಿಳುವಳಿಕೆಯನ್ನು ನೀಡುತ್ತದೆ ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡು ಕಾನೂನು ಬಲ್ಲವರಾಗಬೇಕು” ಎಂದು ಕರೆ ನೀಡಿದರು.

ಈ ದೇಶದಲ್ಲಿ ಮೂರು ಸಾವಿರದ ಆರುನೂರಕ್ಕೂ ಹೆಚ್ಚು ಕಾನೂನುಗಳು ಇವೆ ಅದರಲ್ಲಿ ಮುಖ್ಯವಾಗಿ ಬಾಲ್ಯ ವಿವಾ ನಿಷೇಧ ಕಾನೂನು ಬಾಲ್ಯ ಕಾರ್ಮಿಕ ನಿಷೇಧ ಕಾನೂನು ಪೋಕ್ಸೋ ಕಾನೂನು ಇದ್ದು, ಇವುಗಳ ಬಗ್ಗೆ ಕಾನೂನಾತ್ಮಕವಾಗಿ ದೃಷ್ಟಾಂತದ ಮೂಲಕ ಎಲ್ಲರಿಗೂ ಮನಮುಟ್ಟುವಂತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯ ಗುರುಗಳಾದ ಲಿಂಗರಾಜ ಅಬ್ಬಿಗೆರೆ, ಮುಖ್ಯ ಅತಿಥಿಗಳಾಗಿ ಪ್ರಭು ಆಚಾರ್, ಶಿಕ್ಷಣ ಪ್ರೇಮಿಗಳ ಮಸಬಹಂಚಿನಾಳ ಗ್ರಾಮ್ ಪಂಚಾಯತಿ ಅಧ್ಯಕ್ಷ ಹನುಮಂತಪ್ಪ ಬನ್ನಿಕೊಪ್ಪ, ವಕೀಲರಾದ ರಮೇಶ್ ಗಜಕೋಶ, ವಿನಾಯಕ ಬಳಗೇರಿ, ಜಗದೀಶ್ ತೊಂಡಿಹಾಳ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಬಸವರಾಜ್ ಪಲ್ಲೇದ, ರಾಘವೇಂದ್ರ ಕೋಳಿಹಾಳ, ವಿನಾಯಕ, ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿಗಳು ಹಾಗೂ ಶಾಲಾ ಮಕ್ಕಳು ಶಾಲಾ ಸಿಬ್ಬಂದಿಗಳು ಇದ್ದರು.

Prajavikshane

Chandru R Bhanapaur

Leave a Reply

error: Content is protected !!