‘K 46’ ಚಿತ್ರದ ಆ್ಯಕ್ಷನ್ ದೃಶ್ಯಗಳಿಗಾಗಿ ‘ಕಿಚ್ಚ’ ಸುದೀಪ್ ಭರ್ಜರಿ ವರ್ಕ್‌ಔಟ್!
ಕನ್ನಡದ ಸೂಪರ್ ಸ್ಟಾರ್ ನಟ ‘ಕಿಚ್ಚ’ ಸುದೀಪ್ ಅವರು “ವಿಕ್ರಾಂತ್ ರೋಣ” ಸಕ್ಸಸ್ ಬಳಿಕ ಈಗ ತುಂಬಾ ಸಮಯ ತಗೆದುಕೊಂಡು ತಮ್ಮ ಮುಂದಿನ ‘K-46’ ಚಿತ್ರಕ್ಕಾಗಿ ಬಹಳಷ್ಟು ಶ್ರಮ ಹಾಕುತ್ತಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಸಿನಿಮಾಕ್ಕಾಗಿ ಬೃಹತ್ ಆದ ಅದ್ದೂರಿ ಸೆಟ್ ಹಾಕಲಾಗಿದ್ದು, 26ಕ್ಕೂ ಅಧಿಕ ದಿನಗಳ ಕಾಲ ಅಲ್ಲಿದ್ದು, ಚಿತ್ರದ ಒಂದು ಹಂತದ ಶೂಟಿಂಗ್ ಮುಗಿಸಿಕೊಂಡು ಬಂದಿದ್ದಾರೆ. ಇದೀಗ ನಟ ‘ಕಿಚ್ಚ’ ಸುದೀಪ್ ತಮ್ಮ ಈ ಸಿನಿಮಾಕ್ಕಾಗಿ ಅವರು ತಮ್ಮ ದೇಹವನ್ನು ಹುರಿಗೊಳಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವರ್ಕ್‌ಔಟ್ ಫೋಟೋವೊಂದನ್ನು ಸುದೀಪ್ ಹಂಚಿಕೊಂಡಿದ್ದಾರೆ.ಆ ಪೋಟೋಗಳು ಸಖತ್ ವೈರಲ್ ಆಗುತ್ತಿವೆ.
ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿರುವ ಫೋಟೋವನ್ನು ನಟ ‘ಕಿಚ್ಚ’ ಸುದೀಪ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ‘ತಾಲೀಮು ನನ್ನ ಹೊಸ ಹ್ಯಾಪಿ ಸ್ಪೇಸ್ ಆಗಿದೆ. ಪ್ರತಿದಿನದ ಇಂತಹ ದಿನಚರಿ ನನ್ನನ್ನು ಶಾಂತವಾಗಿರಿಸುತ್ತದೆ ಹಾಗೂ ಫೋಕಸ್ ಆಗಿರುವಂತೆ ಮಾಡುತ್ತದೆ. ‘K-46′ ಸಿನಿಮಾದ ಕ್ಲೈಮ್ಯಾಕ್ಸ್ ಫೈಟ್ ಸೀಕ್ವೆನ್ಸ್ ಇನ್ನೊಂದು ತಿಂಗಳಲ್ಲಿ ಅಥವಾ ಅದಕ್ಕಿಂತ ಮೊದಲು ನಡೆಯಲಿದ್ದು, ಅದಕ್ಕಾಗಿ ನನ್ನ ವರ್ಕೌಟ್ ಸ್ಟೇಷನ್‌ನಲ್ಲಿ ಸಾಧಿಸಲು ಸಾಕಷ್ಟಿದೆ’ ಎಂದು ಬರೆದುಕೊಂಡು ಫೋಟೋವನ್ನು ಹಂಚಿಕೊಂಡಿದ್ದಾರೆ.