ಕುಕನೂರು ಆಸ್ಪತ್ರೆಗೆ ಇನ್ನೆರಡು ದಿನದಲ್ಲಿ ತಜ್ಞ ವೈದ್ಯರ ನಿಯೋಜನೆ : ಡಿ ಹೆಚ್ ಒ ಡಾ.ಲಿಂಗರಾಜು
ಕುಕನೂರು : ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರಕ್ಕೆ ಇನ್ನೆರಡು ದಿನದಲ್ಲಿ ಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು, ಅರವಳಿಕೆ ತಜ್ಞರನ್ನು ನಿಯೋಜನೆ ಮಾಡಲಾಗುವುದು ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ ಲಿಂಗರಾಜು ಹೇಳಿದರು.
ಕುಕನೂರು ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಕುಕನೂರು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ತಮ್ಮ ಗಮನಕ್ಕೆ ಬಂದಿದ್ದು ಅಗತ್ಯ ಸಿಬ್ಬಂದಿಗಳ ನಿಯೋಜನೆ ಇನ್ನೆರಡು ದಿನದಲ್ಲಿ ನಿಯೋಜನೆ ಆಗಲಿದೆ, ಅಲ್ಲದೇ ತಾಲೂಕಿನ ಆಸ್ಪತ್ರೆಯಲ್ಲಿ ಯಾವುದೇ ಸಿಬ್ಬಂದಿ ಕೊರತೆ, ಔಷದಿ ಕೊರತೆ ಇಲ್ಲ ಎಂದು ಅವರು ಹೇಳಿದರು.
ಸಮುದಾಯ ಅರೋಗ್ಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಕನಕಗಿರಿ, ಕಾರಟಗಿ, ಕುಕನೂರು ಸಿ ಎಚ್ ಸಿ ಗಳನ್ನು ಶೀಘ್ರದಲ್ಲಿ ತಾಲೂಕು ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೆ ಎತ್ತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಡಿ ಹೆಚ್ ಒ ಡಾ. ಲಿಂಗರಾಜು ಹೇಳಿದ್ದಾರೆ.
, ಅರೋಗ್ಯ ಇಲಾಖೆ ಮತ್ತು ಸ್ಥಳೀಯ ಶಾಸಕರ ಮನವಿಗೆ ಅನುಗುಣವಾಗಿ ಜಿಲ್ಲೆಯ ಮೂರು ತಾಲೂಕಿನ ಸಮುದಾಯ ಅರೋಗ್ಯ ಕೇಂದ್ರ ಗಳನ್ನು ಉನ್ನತೀಕರಣಗೊಳಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರದಲ್ಲಿ ಕಾರ್ಯಗತಗೊಳ್ಳುವ ವಿಶ್ವಾಸವಿದೆ. ಸ್ಥಳೀಯ ಶಾಸಕರು ಕೂಡಾ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಕಾಳಜಿ ಹೊಂದಿದ್ದಾರೆಜನಸಾಮಾನ್ಯರ ಅವಶ್ಯಕತೆಗೆ ಅನುಗುಣವಾಗಿ ಆಸ್ಪತ್ರೆಗಳು ಉನ್ನತಿಕರಣ ಹೊಂದಲಿವೆ ಎಂದು ಡಾ. ಲಿಂಗರಾಜು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಆಸ್ಪತ್ರೆ ವೈದ್ಯರಾದ ಸಿ ಎಸ್ ಹಿರೇಮಠ ಅವರು ಜೊತೆಗಿದ್ದರು.