GOOD NEWS : ವಿಕಲಚೇತನರನ್ನು ಮದುವೆಯಾದವರಿಗೆ ಬಂಪರ್ ಆಫರ್..!

You are currently viewing GOOD NEWS : ವಿಕಲಚೇತನರನ್ನು ಮದುವೆಯಾದವರಿಗೆ ಬಂಪರ್ ಆಫರ್..!

ಕೊಪ್ಪಳ : ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2023-24ನೇ ಸಾಲಿಗೆ ವಿವಾಹ ಪ್ರೋತ್ಸಾಹಧನದಡಿ, ವಿಕಲಚೇತನರೊಂದಿಗೆ ವಿವಾಹವಾದ ಸಾಮಾನ್ಯ ವ್ಯಕ್ತಿಗೆ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿಕಲಚೇತನರೊಂದಿಗೆ ವಿವಾಹವಾದ ಸಾಮಾನ್ಯ ವ್ಯಕ್ತಿಗೆ ರೂ.50,000/- ಪ್ರೋತ್ಸಾಹಧನ ನೀಡಲಾಗುವುದು. ದಿನಾಂಕ: 28-08-2013 ರ ನಂತರ ಮದುವೆ ಆದವರು ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನವಾಗಿದೆ.

ಅರ್ಜಿದಾರರು ನಿಗದಿತ ಅರ್ಜಿ ನಮೂನೆಯೊಂದಿಗೆ ಪೂರಕ ದಾಖಲೆಗಳಾದ ವಾಸಸ್ಥಳ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಯು.ಡಿ.ಐ.ಡಿ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಪ್ರತಿ(ಜಂಟಿ ಖಾತೆ), ಲಗ್ನ ಪತ್ರಿಕೆ ಮೂಲ ಪ್ರತಿ, ಮದುವೆ ನೋಂದಣಿ ಪ್ರಮಾಣ ಪತ್ರ, ರೂ.20/- ಗಳ ಬಾಂಡ್(ಈ ಮೊದಲು ಮದುವೆ ಆಗಿರುವುದಿಲ್ಲ ಎಂಬ ಕುರಿತು), ವೈದ್ಯಕೀಯ ಅರ್ಹತಾ ಪ್ರಮಾಣ ಪತ್ರ(ಸಾಮಾನ್ಯ ವ್ಯಕ್ತಿ), ವಿ.ಆರ್.ಡಬ್ಲ್ಯೂ, ಯುಆರ್‌ಡಬ್ಲ್ಯೂಮತ್ತು ಎಂಆರ್‌ಡಬ್ಲ್ಯೂ ಅವರ ವರದಿ ಹಾಗೂ 2 ಭಾವಚಿತ್ರಗಳೊಂದಿಗೆ ನಿಗದಿತ ದಿನಾಂಕದೊಳಗೆ ಕಛೇರಿಯ ಅವಧಿಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾಲಯ ಆವರಣ, ಕೊಠಡಿ ಸಂಖ್ಯೆ 31, 32 ರಿಲಾಯನ್ಸ್ ಪೆಟ್ರೋಲ್ ಬಂಕ್ ಎದುರುಗಡೆ, ಹೊಸಪೇಟೆ ರಸ್ತೆ ಕೊಪ್ಪಳ ಇವರಿಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ದೂರವಾಣಿ ಸಂಖ್ಯೆ:08539-295460 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!