BIG NEWS : “ಇಂದಿರಾ ಕ್ಯಾಂಟೀನ್” : ನೂತನ ಊಟ-ಉಪಹಾರದ ಚಾಟ್‌ ಇಲ್ಲಿದೆ..!

You are currently viewing BIG NEWS : “ಇಂದಿರಾ ಕ್ಯಾಂಟೀನ್” : ನೂತನ ಊಟ-ಉಪಹಾರದ ಚಾಟ್‌ ಇಲ್ಲಿದೆ..!

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಇಂದಿರಾ ಕ್ಯಾಂಟ್ ಗಳಿಗೆ ಪುನರ್ ಚೇತನ ನೀಡಲಾಗಿದ್ದು, ಈ ಬೆನ್ನಲ್ಲೇ ಅಗ್ಗದ ದರದಲ್ಲಿ ಊಟ-ಉಪಹಾರವನ್ನು, ಅದರಲ್ಲೂ ಶುಚಿ-ರುಚಿಯಿಂದ ಒಳಗೊಂಡಿರುವ ಆಹಾರವನ್ನು ನೀಡುವುದಕ್ಕೆ ಸಜ್ಜಾಗಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ‘ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಗಳು ಈಗ ಮತ್ತಷ್ಟು ಶುಚಿ, ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧಗೊಂಡಿವೆ. ರಿಯಾಯಿತಿ ದರದಲ್ಲಿ ಸ್ವಾದಿಷ್ಟ ತಿಂಡಿ, ಊಟ ದೊರೆಯುವ ಇಂದಿರಾ ಕ್ಯಾಂಟೀನ್ ಯೋಜನೆಯ ಸಂಪೂರ್ಣ ಸದುಪಯೋಗ ಪಡೆಯಿರಿ ಎಂದು ಹೇಳಿದ್ದಾರೆ.

ಶುಚಿ-ರುಚಿಯ ನೂತನ ಊಟ-ಉಪಹಾರದ ಚಾಟ್‌

ಪ್ರಿತಿ ದಿನ ಬೆಳಿಗ್ಗೆ 7 ರಿಂದ 10ರವರೆಗೆ ಉಪಾಹಾರ

* ಇಂಡ್ಲಿ-ಸಾಂಬಾರ್
* ವೆಜ್ ಪಲಾವ್-ರಾಯಿತಾ
* ಖಾರಾಬಾತ್-ಚಟ್ನಿ
* ಚೌಚೌಬಾತ್-ಚಟ್ನಿ
* ಮಂಗಳೂರು ಬನ್ಸ್
* ಇಡ್ಲಿ-ಚಟ್ನಿ
* ಬಿಸಿಬೇಳೆ ಬಾತ್-ಬೂಂದಿ
* ಪೊಂಗಲ್-ಚಟ್ನಿ
* ಬ್ರೆಡ್-ಜಾಮ್
* ಬನ್ಸ್.

ಮಧ್ಯಾಹ್ನದ ಊಟ 1 ರಿಂದ 3 ಗಂಟೆವರೆಗೆ

* ಅನ್ನ-ತರಕಾರಿ ಸಾಂಬಾರು, ಖೀರು
* ಅನ್ನ-ತರಕಾರಿ ಸಾಂಬಾರು, ರಾಯಿತಾ
* ಅನ್ನ-ತರಕಾರಿ ಸಾಂಬಾರು, ಮೊಸರನ್ನ
* ರಾಗಿ ಮುದ್ದೆ-ಸೊಪ್ಪಿನ ಸಾರು, ಖೀರು
* ಚಪಾತಿ-ಸಾಗು, ಖೀರು

ರಾತ್ರಿ ಊಟ ಸಂಜೆ 7.30ರಿಂದ ರಾತ್ರಿ 9 ಗಂಟೆವರೆಗೆ

* ಅನ್ನ-ತರಕಾರಿ ಸಾಂಬಾರು
* ಅನ್ನ-ತರಕಾರಿ ಸಾಂಬಾರು, ರಾಯಿತಾ
* ರಾಗಿ ಮುದ್ದೆ-ಸೊಪ್ಪಿನ ಸಾರು
* ಚಪಾತಿ-ವೆಜ್ ಗ್ರೇವಿ.

ವಿಶೇಷವಾಗಿ ಮಾವಿನಕಾಯಿ ಸೀಸನ್ ನಲ್ಲಿ ಮಾವಿನಕಾಯಿ ಚಿತ್ರಾನ್ನ ಕೂಡ ಇನ್ಮುಂದೆ ಇಂದಿರಾ ಕ್ಯಾಂಟೀನ್ ನಲ್ಲಿ ಲಭ್ಯವಾಗಲಿದೆ. ಈ ಮೂಲಕ ಇಂದಿರಾ ಕ್ಯಾಂಟೀನ್ ಆಹಾರ ಪ್ರೀಯರಿಗೆ, ಮತ್ತಷ್ಟು ರುಚಿಕರವಾದ ಸವಿ ಉಣಬಡಿಸಲಿದೆ.

Leave a Reply

error: Content is protected !!