ಬಿಜೆಪಿಗೆ ಮರು ಸೇರ್ಪಡೆಯಾದ ಜಗದೀಶ್ ಶೆಟ್ಟರ್.!! ಶೀಘ್ರದಲ್ಲಿ ಸವದಿ, ಜನಾರ್ಧನ್ ರೆಡ್ಡಿ ಬಿಜೆಪಿಗೆ ?
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೊಡಲಿಲ್ಲ ವೆಂದು ಮುನಿಸಿಕೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ಮತ್ತೆ ಬಿಜೆಪಿ ಗೆ ಮರು ಸೇರ್ಪಡೆಗೊಂಡಿದ್ದಾರೆ.
ಇಂದು ದೆಹಲಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ, ಕೇಂದ್ರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷಕ್ಕೆ ಘರ್ ವಾಪ್ಸಿಯಾಗಿದ್ದಾರೆ.
ಶೆಟ್ಟರ್ ಅವರು ಹಲವು ದಿನಗಳ ಹಿಂದೆಯೇ ಬಿಜೆಪಿ ಪಕ್ಷಕ್ಕೆ ವಾಪಸ್ ಆಗುತ್ತಾರೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಿದ್ದದವು. ಅದು ನಿಜವಾಗಿದ್ದು ಇಂದು ಅಧಿಕೃತವಾಗಿ ಬಿಜೆಪಿ ಮರು ಸೇರ್ಪಡೆಗೊಂಡಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಇದೊಂದು ದೊಡ್ಡ ತಿರುವಾಗಿದ್ದು ಬಿಜೆಪಿ ಪಕ್ಷ ತೊರೆದು ಹೋದ ಇನ್ನಿತರ ನಾಯಕರು ಕೂಡಾ ಮುಂದಿನ ದಿನಗಳಲ್ಲಿ ಮರಳಿ ಬಿಜೆಪಿ ಪಕ್ಷಕ್ಕೆ ಸೇರುತ್ತಾರೆ ಎಂದು ಹೇಳಲಾಗುತ್ತಿದೆ.
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮತ್ತು ಕೆ ಆರ್ ಪಿ ಪಕ್ಷದ ಸಂಸ್ಥಾಪಕ, ಮಾಜಿ ಸಚಿವ ಜನಾರ್ಧನ್ ರೆಡ್ಡಿ ಅವರು ಕೂಡಾ ಶೀಘ್ರದಲ್ಲಿ ಬಿಜೆಪಿ ಪಕ್ಷಕ್ಕೆ ಮರಳುತ್ತಿದ್ದಾರೆ ಎಂದು ರಾಷ್ಟೀಯ ಸುದ್ದಿ ವಾಹಿನಿ ರಿಪಬ್ಲಿಕ್ ಮೀಡಿಯಾ ವರದಿ ಮಾಡಿದೆ.
ಈ ಇಬ್ಬರೂ ಮರಳಿ ಬಿಜೆಪಿ ಪಕ್ಷಕ್ಕೆ ಸೇರಿದ್ದೇಯಾದರೆ ಕೊಪ್ಪಳ ಜಿಲ್ಲೆ ಮತ್ತು ಅದರಲ್ಲೂ ವಿಶೇಷ ವಾಗಿ ಲಕ್ಷ್ಮಣ್ ಸವದಿ ಅವರ ಪ್ರಭಾವವಿರುವ ಯಲಬುರ್ಗಾ ತಾಲೂಕಿನಲ್ಲಿ ಬಿಜೆಪಿ ಪಕ್ಷ ಮತ್ತಷ್ಟು ಬಲಗೊಳ್ಳುವುದಂತೂ ಸ್ಪಷ್ಟ.
ಪ್ರಜಾವೀಕ್ಷಣೆ ಸುದ್ದಿ ಜಾಲ.