ದಾವಣಗೆರೆ : ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದ ಸಮೀಪ ಬಿ.ಸಿ. ಪಾಟೀಲ್ ಅವರ ದೊಡ್ಡ ಮಗಳ ಗಂಡ ಪ್ರತಾಪ್ ಕುಮಾರ್ (41) ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಾರಿನಲ್ಲಿ ಹೋಗಿದ್ದ ಪ್ರತಾಪ್ ಕುಮಾರ್ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಅಸಲಿಗೆ ಆತ್ಮಹತ್ಯೆಗೆ ಕಾರಣವೇನು? ಎಂದು ಇನ್ನಷ್ಟ ತಿಳಿಯಬೇಕಿದೆ.
ಮೃತ ಪ್ರತಾಪ್ ಕುಮಾರ್ ಅವರು ಮಕ್ಕಳಾಗದಿದ್ದಕ್ಕೆ ಕುಗ್ಗಿ ಮಾನಸಿಕವಾಗಿ ಹೋಗಿದ್ದರು ಎಂದು ಎಂದು ತಿಳಿದು ಬಂದಿದೆ. ಪ್ರತಾಪ್ ಕುಮಾರ್ ಅವರು ಬಿ.ಸಿ.ಪಾಟೀಲ್ ಅವರ ಹಿರಿಯ ಮಗಳು ಸೌಮ್ಯ ಪಾಟೀಲ್ ವರಸಿದ್ದರು. ಹೊನ್ನಾಳಿ ತಾಲೂಕಿನ ಅರಕೆರೆ ಸಮೀಪದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ನಡದ ತಕ್ಷಣ ಪ್ರತಾಪ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ಚಿಕಿತ್ಸೆ ಫಲಕಾರಿಯಾಗದೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತಾಪ್ ಮೃತಪಟ್ಟಿದ್ದಾರೆ.