You are currently viewing BREAKING : 40 ಸಾವಿರ ಲಂಚಕ್ಕೆ ಬೇಡಿಕೆ. ಲೋಕಾಯುಕ್ತ ಬಲೆಗೆ ಬಿದ್ದ ಬೆಣಕಲ್ ಗ್ರಾ. ಪಂ. ಪಿ. ಡಿ. ಓ.

BREAKING : 40 ಸಾವಿರ ಲಂಚಕ್ಕೆ ಬೇಡಿಕೆ. ಲೋಕಾಯುಕ್ತ ಬಲೆಗೆ ಬಿದ್ದ ಬೆಣಕಲ್ ಗ್ರಾ. ಪಂ. ಪಿ. ಡಿ. ಓ.

40 ಸಾವಿರ ಲಂಚಕ್ಕೆ ಬೇಡಿಕೆ. ಲೋಕಾಯುಕ್ತ ಬಲೆಗೆ ಬಿದ್ದ ಬೆಣಕಲ್ ಗ್ರಾ. ಪಂ. ಪಿ. ಡಿ. ಓ.

ಕುಕನೂರು : 50 ಸಾವಿರರೂಗೆ ಬೇಡಿಕೆ ಇಟ್ಟು ಕೊನೆಗೆ 40 ಸಾವಿರ ರೂ ಲಂಚ ಸ್ವೀಕರಿಸುವ ವೇಳೆ ಕುಕನೂರು ಬೆಣಕಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಫಾರಂ 9/11 ಕೊಡಲು 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಣಕಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣಾ ರೆಡ್ಡಿ 40 ಸಾವಿರ ರೂ ಲಂಚವನ್ನು ಪಡೆಯುವ ವೇಳೆ ಲೋಕಾಯುಕ್ತ ಪೊಲೀಸ್ ರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಕೊಟ್ರೇಶ್ ಗೊನ್ನಿ ಎಂಬುವವರು ತಮ್ಮ ಜಮೀನು ಡೆವಲಪ್ಮೆಂಟ್ ಗಾಗಿ ಫಾರಂ 9/11 ಪಡೆಯಲು ಹೋದಾಗ ಅಭಿವೃದ್ಧಿ ಅಧಿಕಾರಿ ಕೃಷ್ಣಾ ರೆಡ್ಡಿ 50 ಸಾವಿರ ರೂಪಾಯಿ ಲಂಚ ಕೇಳಿದ್ದಾರೆ, ಹಾಗೂ ಹೀಗೂ 40 ಸಾವಿರಕ್ಕೆ PDO ಕೃಷ್ಣಾ ರೆಡ್ಡಿ ಒಪ್ಪಿಕೊಂಡಿದ್ದರು.

ಇಂದು ಕೊಪ್ಪಳ ನಗರದಲ್ಲಿ ಸಂಜೆ 4:30ರ ವೇಳೆಯಲ್ಲಿ ಖಾಸಗಿ ವ್ಯಕ್ತಿಯ ಮೂಲಕ 40 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ರಾಜೇಶ್ ಬಟಾಕುರ್ಕಿ ಅವರ ನೇತೃತ್ವದ ತಂಡ ಭ್ರಷ್ಟ ಅಧಿಕಾರಿಯನ್ನು ಖೇಡ್ದಾಗೆ ಕೆಡುವವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ಲೋಕಾಯುಕ್ತ ನ್ಯಾಯಾಲಯಕ್ಕೆ ಪಡೆಯಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ರಾಜೇಶ್ ಬಟಾಕುರ್ಕಿ ಹೇಳಿದರು.

Prajavikshane

Chandru R Bhanapaur

Leave a Reply

error: Content is protected !!