ಬಸವಶ್ರೀ ಕ್ಲಿನಿಕ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ, ಆಪ್ತಸಮಾಲೋಚನೆ ಹಾಗೂ ಔಷೋಧೊಪಚಾರ!
ಕುಕನೂರು : ತಾಲೂಕಿನ ಬಿನ್ನಾಳ ಗ್ರಾಮದ ಬಸವಶ್ರೀ ಕ್ಲಿನಿಕ್ ಇವರ ವತಿಯಿಂದ ದಸರಾ ಹಬ್ಬ ಹಾಗೂ ಮಹಾಮಾಯಾ ದೇವಿಯ ಜಾತ್ರೆಯ ಪ್ರಯುಕ್ತ ಪಟ್ಟಣದ ವೃದ್ರಾಶ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ, ಆಪ್ತಸಮಾಲೋಚನೆ ಹಾಗೂ ಔಷಫಧೊಪಚಾರವನ್ನು ಡಾ.ಅಮೃತಾ ಮಳಗಿ ನೆಡೆಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ‘ಡಾಕ್ಟರ್ ಆಗಿ ಸೇವೆ ಮಾಡುವ ಅವಕಾಶ ಸಿಕ್ಕದ್ದು ನನ್ನ ಭಾಗ್ಯ. ಡಾಕ್ಟರ್ ಆದವರು ತಮ್ಮ ಕೆಲಸವನ್ನು ವೃತ್ತಿಯನ್ನಾಗಿ ತಿಳಿಯದೆ ಸೇವೆ ಎಂದು ತಿಳಿದು ಆಪ್ತ ಸಮಾಲೋಚನೆಯಿಂದ ರೋಗಿಗಳ ಜೊತೆ ಮಾತನಾಡಿ ಚಿಕಿತ್ಸೆ ನೀಡಿದ್ದಲ್ಲಿ ರೋಗಿಯ ಅರ್ಧ ರೋಗ ವಾಸಿಯಾದಂತೆ ಎಂದ ಅವರು, ದಸರಾ ಹಾಗೂ ಮಹಾಮಾಯ ದೇವಿಯ ಜಾತ್ರೆಯ ಪ್ರಯುಕ್ತ ಈ ಉಚಿತ ಉಚಿತ ಆರೋಗ್ಯ ತಪಾಸಣೆ, ಆಪ್ತಸಮಾಲೋಚನೆ ಹಾಗೂ ಔಷಫಧೊಪಚಾರವನ್ನು ಬಸವಶ್ರೀ ಕ್ಲಿನಿಕ್ ಬಿನ್ನಾಳ ಇವರ ವತಿಯಿಂದ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೃದ್ರಾಶ್ರಮದ ಆಡಳಿತ ವರ್ಗ ಹಾಗೂ ಬಸವಶ್ರೀ ಕ್ಲಿನಿಕ್ ಸಿಬ್ಬಂದಿಗಳು ಹಾಗೂ ಇತರರಿದ್ದರು.