87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ
ಲಕ್ಷ್ಮೇಶ್ವರ : ಕನ್ನಡ ತಾಯಿ ಭುವನೇಶ್ವರಿ ಜ್ಯೋತಿ ರಥ ಯಾತ್ರೆ ನಗರಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಶಾಸಕ ಡಾ.ಚಂದ್ರು ಲಮಾಣಿ, ತಾಲೂಕು ದಂಡಾಧಿಕಾರಿ ಸ್ವಾಮಿ, ತಾಲೂಕ್ ಪಂಚಾಯತ ಇ.ಓ. ಕೃಷ್ಣಪ್ಪ ಧರ್ಮರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಸ್ ಬಿ ಕುಲಕರ್ಣಿ, ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಕನ್ನಡ ಸಂಘಟನೆಗಳಿಂದ ಕನ್ನಡ ಜ್ಯೋತಿ ರಥ ಯಾತ್ರೆ ಅದ್ದೂರಿಯಾಗಿ ಬರಮಾಡಿಕೂಂಡು, ಕನ್ನಡ ತಾಯಿ ಭುವನೇಶ್ವರಿ ಮೂರ್ತಿಗೆ ಪೂಜೆಯ ಸಲ್ಲಿಸಿ, ಗೌರವ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಣ್ಣ ಮಹಾಂತೇಶೆಟ್ಟರ, ಐಪಿಎಸ್ ಈರಪ್ಪ ಮುಖಂಡರು, ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸರ್ವ ಸದಸ್ಯರು, ಅಧಿಕಾರಿ, ನಗರಸಭೆ ಪೌರಾಯುಕ್ತರು, ಕ್ಷೇತ್ರ ಶಿಕ್ಷಣಾಧಿಕಾರಿ, ತಾಲ್ಲೂಕು ಮಟ್ಟದ ಅಧಿಕಾರಿ, ನಗರಸಭೆ ಸದಸ್ಯರು, ನಾಮ ನಿರ್ದೇಶನ ಸದಸ್ಯರು, ಕಸಾಪ ಜಿಲ್ಲಾ ಅಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು, ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಾಯಿಂದಿರ ಯುವಕ-ಮಿತ್ರರ ಪಾಲ್ಗೊಂಡಿದ್ದರು.