BIG NEWS : ಯಲಬುರ್ಗಾ ವಿಧಾನಸಭಾ ಕ್ಷೇತ್ರ ‘ಸ್ಪೆಷಲ್ ಎಕನಾಮಿಕ್ ಸೇಪ್‌ ಜೋನ್’ : ಸಚಿವ ದಿನೇಶ್‌ ಗುಂಡೂರಾವ್

You are currently viewing BIG NEWS : ಯಲಬುರ್ಗಾ ವಿಧಾನಸಭಾ ಕ್ಷೇತ್ರ  ‘ಸ್ಪೆಷಲ್ ಎಕನಾಮಿಕ್ ಸೇಪ್‌ ಜೋನ್’ : ಸಚಿವ ದಿನೇಶ್‌ ಗುಂಡೂರಾವ್

ಪ್ರಜಾ ವೀಕ್ಷಣೆ ಸುದ್ದಿ :-

BIG NEWS : ಯಲಬುರ್ಗಾ ವಿಧಾನಸಭಾ ಕ್ಷೇತ್ರ ‘ಸ್ಪೆಷಲ್ ಎಕನಾಮಿಕ್ ಸೇಪ್‌ ಜೋನ್’ : ಸಚಿವ ದಿನೇಶ್‌ ಗುಂಡೂರಾವ್

ಕುಕನೂರು :ಯಲಬುರ್ಗಾ ವಿಧಾನಸಭಾ ಕ್ಷೇತ್ರ “ಸ್ಪೆಷಲ್ ಎಕನಾಮಿಕ್ ಸೇಪ್‌ ಜೋನ್” ಆಗಿದೆ’ ಎಂದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು.

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್‌ ಗುಂಡೂರಾವ್ ಅವರು ಇಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕಿನ ಬಳಗೇರಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ವಿಶೇಷ ಆರ್ಥಿಕ ಸುರಕ್ಷಿತ ವಲಯ’ ‘(special economic safe zone)’ ಆಗಿದೆ. ಏಕೆಂದರೇ, ನಿಮ್ಮ ಶಾಸಕ ಬಸವರಾಜ ರಾಯರೆಡ್ಡಿ ಅವರೇ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಆಗುವುದರಿಂದ. ಅವರು ತಮ್ಮ ಕ್ಷೇತ್ರಕ್ಕೆ ಬೇಕಾದಷ್ಟು ಅನುದಾನವನ್ನು ತಂದುಕೊಳ್ಳಬಹುದಾಗಿದೆ. ಹಾಗಾಗಿ ಯಲಬುರ್ಗಾ ವಿಧಾನಸಭಾ ಕ್ಷೇತ್ರವು ‘ವಿಶೇಷ ಆರ್ಥಿಕ ಸುರಕ್ಷಿತ ವಲಯ ‘special economic safe zone ಆಗಿದೆ ಎಂದು ಹೇಳಿದರು.

Leave a Reply

error: Content is protected !!