ಕುಕನೂರು: ರಾಜಕೀಯ ಅಂದ್ರೆ ಅದು ಸಮಾಜಸೇವೆ ವ್ಯಾಪಾರವಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ತಾಲೂಕಿನ ದ್ಯಾoಪುರ ಗ್ರಾಮದಲ್ಲಿ ನೆಡೆದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿಗೆ ಮತ ಹಾಕುವುದರಿಂದ ಏನು ಪ್ರಯೋಜನೆ ಇಲ್ಲ. ಮೋದಿ ಹೆಸರು ಹೇಳಿಕೊಂಡು ಮತ ಪಡೆಯುತ್ತಾರೆ.ಮೋದಿಯವರು ದಿನನಿತ್ಯ ಬಳಕೆಯ ವಸ್ತುಗಳ ಬೆಳೆಯನ್ನು ಏರಿಸಿ ಕುಂತಿದ್ದಾರೆ. ಬೊಮ್ಮಾಯಿ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ.
ಇನ್ನು ಸ್ಥಳೀಯವಾಗಿ ಸಚಿವರಾದ ಹಾಲಪ್ಪ ಏನು ಕೆಲಸ ಮಾಡಿದ್ದಾರೆ ಚರ್ಚೆ ಮಾಡಿ,
ಅಂಗನವಾಡಿ ಕಚೇರಿಗೆ ಸ್ವತಂ ಕಟ್ಟಡವಿಲ್ಲ, ಹಿರಿಯ ನಾಗರಿಕ ಇಲಾಖೆ ಸಚಿವರಾದರು ಕ್ಷೇತ್ರಕ್ಕೆ ಒಂದು ವೃದ್ರಶ್ರಮ ಕೊಟ್ಟಿಲ್ಲ. ಅವರು ತಮ್ಮ ವ್ಯವಹಾರಗಳನ್ನು ರಕ್ಷಿಸಿಕೊಳ್ಳಲು ರಾಜಕೀಯಕ್ಕೆ ಬಂದಿದ್ದಾರೆ.ರಾಜಕೀಯ ಅಂದ್ರೆ ವ್ಯಾಪರವಲ್ಲ ಅದು ಸಮಾಜ ಸೇವೆಯಾಗಿದೆ ಎಂದರು.
ಎ,13 ರಂದು ಸಂಜೆ ಪಟ್ಟಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಈ ಕಾರ್ಯಕ್ರಮಕ್ಕೆ ಕಾರ್ಯಕರ್ತರು ಪಾದಯಾತ್ರೆ ಮೂಲಕ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದರು.ನಾಮ ಪತ್ರ ಸಲ್ಲಿಕೆ ನಂತರ ಚುನಾವಣಾ ಪ್ರಚಾರ ಮಾಡುತ್ತೆನೆ. ನಿಮ್ಮ ಆಶೀರ್ವಾದದಿಂದ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಪ್ರಣಾಳಿಕೆಯಲ್ಲಿ ಹೇಳಿದ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ರಡ್ಡೆಪ್ಪ ಹಿರೇಮನಿ. ಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷ ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಪ್ರಮುಖರಾದ ಹನಮಂತಗೌಡ ಪೊಲೀಸ್ ಪಾಟೀಲ, ಬಸವರಾಜ ಉಳ್ಳಾಗಡ್ಡಿ, ಯಾಂಕಣ್ಣ ಯರಾಶಿ, ವೀರನಗೌಡ ಪೊಲೀಸ್. ಎಜಿ ಭಾವಿಮನಿ. ಕರಬಸಪ್ಪ ನಿಡಗುಂದಿ. ರಾಮಣ್ಣ ಭಜಂತ್ರಿ. ಮಂಜುನಾಥ ಕಡೆಮನಿ. ರೇವಣಪ್ಪ ಹಿರೇಕುರಬರ, ಗಗನ್ ನೋಟಗಾರ,ಶರಣಪ್ಪ ಗಾಂಜಿ,ಮಲ್ಲು ಜಕ್ಕಲಿ,ಹಂಪಯ್ಯ ಹಿರೇಮಠ, ಸುದೀರ ಕೊರ್ಲಳ್ಳಿ, ಶಿವನಗೌಡ ದಾನರಡ್ಡಿ ಹಾಗೂ ಇತರರಿದ್ದರು.
ರಾಜಕಾರಣ ವ್ಯಾಪರವಲ್ಲ ಇದೊಂದು ಸಮಾಜ ಸೇವೆಯಾಗಿದೆ : ರಾಯರೆಡ್ಡಿ
