LOCAL NEWS : ಕೇಂದ್ರ ಸಚಿವ ಅಮಿತ್ ಶಾ ಬಾವಚಿತ್ರ ಕಾಲಿನಿಂದ ತುಳಿದು ಪ್ರತಿಭಟನೆ
ಗದಗ : ನಗರದಲ್ಲಿ ಇಂದು ಕೇಂದ್ರ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ನೀಡಿದ ಹೇಳಿಕೆ ಕುರಿತು ದಲಿತ ಹಾಗೂ ಮುಂತಾದ ಸಂಘಟನೆಗಳು ಸೇರಿಕೊಂಡು ಬಂದಿಗೆ ಕರೆ ನೀಡಿದರು. ಬೆಳ್ಳಂ ಬೆಳಗ್ಗೆ ನಗರದ ಮುಳಗುಂದ ನಾಕ ಸರ್ಕಲ್ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಾನವ ಸರಪಳಿ ನಿರ್ಮಿಸಿ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು.
ಅಮಿತ್ ಶಾ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ನಂತರ ಭಾವಚಿತ್ರ ಸುಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು ಎಂದು ಘೋಷಣೆಯನ್ನು ಕೂಗಿದರು ರಾಜೀನಾಮೆ ನೀಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.