LOCAL NEWS : ಕುಕನೂರು ಪಟ್ಟಣದಲ್ಲಿ ಪುಟ್‌ಪಾತ್ ರಸ್ತೆ ಇಲ್ಲವೇ ..!

You are currently viewing LOCAL NEWS : ಕುಕನೂರು ಪಟ್ಟಣದಲ್ಲಿ ಪುಟ್‌ಪಾತ್ ರಸ್ತೆ ಇಲ್ಲವೇ ..!

ವಿಶೇಷ ವರದಿ : ಪ್ರಜಾ ವೀಕ್ಷಣೆ

LOCAL NEWS : ಕುಕನೂರು ಪಟ್ಟಣದಲ್ಲಿ ಪುಟ್‌ಪಾತ್ ರಸ್ತೆ ಇಲ್ಲವೇ ..!

ಕುಕನೂರು : ಪಟ್ಟಣದಲ್ಲಿ ಹಾದುಹೋಗಿರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ  367ರಲ್ಲಿ ಪೈಪ್‌ಲೈನ್ ಸಲುವಾಗಿ ಸಿಸಿ ರಸ್ತೆಯನ್ನು ಕಟಿಂಗ್ ಮಾಡಲಾಗುತ್ತಿದೆ, ಇದರಿಂದ ಪಟ್ಟಣದಲ್ಲಿ ಪಾದಾಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.

ತುಂಗಭದ್ರಾ ಜಲಾಶಯದಿಂದ ಕೆರೆ ತುಂಬಿಸುವ ಯೋಜನೆ ಅಡಿಯಲ್ಲಿ ನೀರು ಸರಬರಾಜು ಮಾಡುವ  ಪೈಪ್ಲೈನ ಅಳವಡಿಕೆಗೆ ಪಟ್ಟಣದ ಹೃದಯ ಭಾಗದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ  367ರಲ್ಲಿ ಸಿಸಿ ರಸ್ತೆಯನ್ನ ಕಟ್ಟಿಂಗ್ ಮಾಡುತ್ತಿರುವುದು ಸಾರ್ವಜನಿಕರಿಗೆ ವಾಹನ ಓಡಾಟಕ್ಕೆ ತೊಂದರೆಯಾಗುತ್ತಿದೆ.

ಈ ಕಾಮಗಾರಿಯ ಕೆಲಸವನ್ನು ಜನಸಂದಣಿ ಇರದ ಸಮಯದಲ್ಲಿ ಮಾಡಿದರೆ ಉತ್ತಮ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಇದರ ಜೊತೆಗೆ ರಸ್ತೆ ಕತ್ತರಿಸುವುದರಿಂದ ಉಪಯೋಗವಿಲ್ಲ, ರಸ್ತೆ ಬದಿಯಲ್ಲಿರುವ ಫುಟ್ಪಾತ್ ಸ್ಥಳವನ್ನು ಈ ಪೈಪ್ ಲೈನ್ ಅಳುವಳಿಕೆಗೆ ಉಪಯೋಗಿಸಿಕೊಳ್ಳಬೇಕು ಎಂದು ಕೆಲಸ ಸಾರ್ವಜನಿಕರ ಒತ್ತಾಯ ಮಾಡಿದ್ದಾರೆ.

ಪಟ್ಟಣದಲ್ಲಿ ಪೈಪ್‌ಲೈನ್ ಅಳವಡಿಸಲು ಪುಟ್ ಪಾತ್ ರಸ್ತೆೆ ಇಲ್ಲವೇ ಎಂದು ಜನ ಪ್ರಶ್ನೇ ಮಾಡಿಕೊಳ್ಳುತ್ತಿದ್ದಾರೆ.  ಅಲ್ಲದೇ ಪುಟ್‌ಪಾರ್ ರಸ್ತೆಯನ್ನು ಅಂಗಡಿ ಮುಂಗಟ್ಟಿನವರು ಅತಿಕ್ರಮ ಮಾಡಿದ್ದೇ ಈ ರಸ್ತೆಯನ್ನು ಕೊರೆಯಲು ಕಾರಣವಾಗಿದೆ. ಆದ್ದರಿಂದ ಕೂಡಲೆ ಸಂಬOದಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ರಸ್ತೆ ಕೊರೆಯುವುದನ್ನು ತಪ್ಪಿಸಿ ಪುಟ್‌ಪಾತ್ ತೆರವುಗೊಳಿಸಿ ಅಲ್ಲಿ ಕಾಮಗಾರಿಯನ್ನು ನೆಡೆಸಬೇಕು ಎಂಬುದು ಪ್ರಜ್ಞಾವಂತ ನಾಗರೀಕ ಪ್ರಶ್ನೇಯಾಗಿದೆ.

Leave a Reply

error: Content is protected !!