ಕುಕನೂರು : ಇದೆ ತಿಂಗಳ ಸೆಪ್ಟೆಂಬರ್ 18 ರಂದು ಗಣೇಶ ಚತುರ್ಥಿಯ ಆಚರಣೆ ಹಾಗೂ ಸೆಪ್ಟೆಂಬರ್ 28 ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕುಕನೂರ ಪೊಲೀಸ್ ಠಾಣೆಯಲ್ಲಿ ಇಂದು ಡಿವೈಎಸ್ಪಿ ಶರಣಬಸಪ್ಪ ಸುಬೇದಾರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಮೌನೇಶ್ ಪಾಟೀಲ್, “ಕುಕನೂರು-ಯಲಬುರ್ಗಾ ನಗರಗಳು ಸೌಹಾರ್ದ ನಗರಗಳು ಎಂದು ಪ್ರಸಿದ್ದಿ ಪಡೆದುಕೊಂದಿದೆ. ಹಾಗಾಗಿ ಎಲ್ಲರೂ ಶಾಂತಿಯಿಂದ ನಿಮ್ಮ ಹಬ್ಬಗಳನ್ನು ಆಚರಣೆ ಮಾಡಿ, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದೆ ಈದ್ ಮಿಲಾದ್ ಹಾಗೂ ಗಣೇಶ ಜೊತೆ ಆಚರಣೆ ಮಾಡಿ” ಎಂದರು.

ಈ ಸಭೆ ಅಧ್ಯಕ್ಷತೆ ವಹಿಸಿದ ಡಿವೈಎಸ್ ಪಿ ಶರಣಬಸಪ್ಪ ಸುಭೆದಾರ್ ಮಾತನಾಡಿ, “ವ್ಯಯಕ್ತಿಕ ಹೇಗೆತನ ಬೇಡ, ಶಾಂತಿ ಸೌಹಾರ್ದತೆಯಿಂದ ಈ ಹಬ್ಬಗಳನ್ನ ಆಚರಣೆ ಮಾಡಬೇಕು ಶಾಂತಿ ಎಲ್ಲಿರುತ್ತೋ ಅಲ್ಲಿ ಸಮೃದ್ಧಿ ಹೆಚ್ಚಾಗಿರುತ್ತೆ. ಈ ಹಬ್ಬಗಳಲ್ಲಿ ಯುವಕರು ತುಂಬಾ ಜಾಗೃತೆಯಿಂದ ಭಾಗವಹಿಸಬೇಕು. ಯಾವುದೇ ಯಾವುದೇ ತಂಟೆ ತಕರಾರು ಜಗಳಗಳಲ್ಲಿ ಭಾಗವಹಿಸಿದರೆ, ನಿಮ್ಮ ಮುಂದಿನ ಭವಿಷ್ಯಕ್ಕೆ ಅದು ಮಾರಕವಾಗಿರುತ್ತದೆ. ಒಂದು ವೇಳೆ ಜಗಳ ಜಗಳಗಳಲ್ಲಿ ಭಾಗಿಯಾದರೆ ನಿಮ್ಮ ಮೇಲೆ ಪೊಲೀಸ್ ಕೇಸ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ” ಎಂದು ಯುವಕರಿಗೆ ಕಿವಿ ಮಾತು ಹೇಳಿದರು.

ಕುಕನೂರು ಠಾಣೆಯ ಪಿಎಸ್ಐ ಟಿ. ಗುರುರಾಜ್ ಮಾತನಾಡಿ, “ಗೌರಿ ಗಣೇಶ ಮಂಡಳಿಯವರಿಗೆ ಪೊಲೀಸ್ ಠಾಣೆ ಸೂಚನೆಗಳನ್ನು ಹೇಳಿದರು.