ಗಜೇಂದ್ರಗಡ : ಗದಗ ಜಿಲ್ಲೆಯ ಸ್ಥಳೊಂದರ ಬೆಟ್ಟದ ತುದಿಯಲ್ಲಿ ಅಳವಡಿಸುವ ಖಾಸಗಿ ಕಂಪನಿಯ ವಿಂಡ್ ಫ್ಯಾನ್ ಮುರಿದು ಭಾರೀ ಅನಾಹುತ ಒಂದು ತಪ್ಪಿದ್ದು, ಈ ಘಟನೆ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ದೇವಾಲಯದ ಪಾದಗಟ್ಟಿ ಮೇಲಿರುವ ಫ್ಯಾನ್ ಮುರಿದು ಬಿದ್ದೀರುವ ಪ್ರಸಂಗ ನಡೆದಿದೆ ಎಂದು ತಿಳಿದು ಬಂದಿದೆ.
ಇದೀಗ ಈ ಬಗ್ಗೆ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಇದು ಬೆಟ್ಟದ ತುfತ ತುದಿಯಲ್ಲಿ ಅವಳಡಿಸಿರುವ ವಿಂಡ್ ಫ್ಯಾನ್ ಗಾಳಿಯ ರಭಸಕ್ಕೆ ಮಿರಿದು ಬಿದ್ದಿದೆ. ಈ ವೇಳೆಯಲ್ಲಿ ಅಕ್ಕ ಪಕ್ಕ ಹೊಲದಲ್ಲಿ ರೈತಾಪಿ ಜನರು ಕೇಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಒಂದು ಕ್ಷಣ ಭಯಾನಕ ಸಂಧರ್ಭಯೊಂದು ಬಂದೊದಗಿತ್ತು ಎನ್ನಬಹುದು.
ಈ ಘಟನೆಯ ಬಗ್ಗೆ ತಿಳಿದು ಸ್ಥಳೀಯ ಆಡಳಿತ ಮಂಡಳಿ ಮುಂದಿನ ದಿನದಲ್ಲಿ ಈ ರೀತಿಯಲ್ಲಿ ಆಗದ ಹಾಗೇ ಕಂಪನಿಗಳಿಗೆ ಸೂಕ್ತ ಕ್ರಮವಹಿಸಬೇಕು ಎಂದು ಸಾರ್ವಜನಿಕರ ಒತ್ತಾಯ ಮಾಡಿದ್ದಾರೆ.