ಮುದಗಲ್ಲ ವರದಿ.
ತಾಯಿಯ ಹೆಸರಿನಲ್ಲಿ ಒಂದು ಗಿಡ – ಅಭಿಯಾನ…
ಮುದಗಲ್ಲ :ಪುರಸಭೆ ವ್ಯಾಪ್ತಿಯಲ್ಲಿ ತಾಯಿ ಹೆಸರಿನಲ್ಲಿ ಒಂದು ಗಿಡ-ಕಾರ್ಯಕ್ರಮಕ್ಕೆ ಜೂ. 09 :- ವಿಶ್ವ ಪರಸರ ದಿನದ ಪ್ರಯುಕ್ತ
ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ,ಪುರಸಭೆ ಅಧ್ಯಕ್ಷರಾದ ಮಹಾದೇವಮ್ಮ ಗುತ್ತೆದಾರ್ ಅವರು ಚಾಲನೆ ನೀಡಿದರು..
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಯ ನೈರ್ಮಲ್ಯ ಅಧಿಕಾರಿ ರಹೀಮತ್ ಉನ್ನಿಸ್ ಬೇಗಂ ಅವರು
ಮಾತನಾಡಿ. ವಿಶ್ವ ಪರಿಸರ ದಿನದ ಪ್ರಯುಕ್ತ “ತಾಯಿಯ
ಹೆಸರಿನಲ್ಲಿ ಒಂದು ಗಿಡ” ಎಂಬ ಧೈಯ ವಾಕ್ಯದೊಂದಿಗೆ
ತಾಯಂದಿರನ್ನು ಸ್ಮರಿಸಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ವೆಂದು ತಿಳಿಸಿದರು ಮಹಿಳೆಯರಿಗೆ ತಮ್ಮ ತಮ್ಮ ಮನೆ, ಪರಿಸರದಲ್ಲಿ ಗಿಡ ನೆಡುವಂತೆ ಕೋರಿಕೊಂಡುರು
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ರಾದ ಮಹಾದೇವಮ್ಮ ಗುತ್ತೆದಾರ್ ,ಉಪಾಧ್ಯಕ್ಷರಾದ ಅಜ್ಮೀರ್ ಬೆಳ್ಳಿಕಟ್ , ಪುರಸಭೆ ಸದಸ್ಯರಾದ ಹನುಮಂತ ವಾಲ್ಮೀಕಿ,ಹಾಗೂ ತಮ್ಮಣ್ಣ ಗುತ್ತೆದಾರ್ ,ಹಸನಸಾಬ ಖವಾ , ಮೈಬುಸಾಬ ಬಾರಿಗಿಡ, ಪುರಸಭೆ ಮ್ಯಾನೇಜರ್ ಸುರೇಶ , ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ