You are currently viewing BREAKING NEWS : ಶಿಕ್ಷಣ ಇಲಾಖೆಯಲ್ಲಿ ಬಹಳಷ್ಟು ರಾಡಿ..!! : ಸಚಿವ ಮಧು ಬಂಗಾರಪ್ಪ

BREAKING NEWS : ಶಿಕ್ಷಣ ಇಲಾಖೆಯಲ್ಲಿ ಬಹಳಷ್ಟು ರಾಡಿ..!! : ಸಚಿವ ಮಧು ಬಂಗಾರಪ್ಪ

ಪ್ರಜಾ ವೀಕ್ಷಣೆ ಸುದ್ದಿ :-

BREAKING NEWS : ಶಿಕ್ಷಣ ಇಲಾಖೆಯಲ್ಲಿ ಬಹಳಷ್ಟು ರಾಡಿ..!! : ಸಚಿವ ಮಧು ಬಂಗಾರಪ್ಪ

ಕುಕನೂರು : ‘ಶಿಕ್ಷಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುವುದು ಸುಲಭದ ಮಾತಲ್ಲ, ಇಲ್ಲಿ ಸಾಕಷ್ಟು ರಾಡಿ (ಕೊಚ್ಚೆಗುಂಡಿ) (ಸಮಸ್ಯೆಗಳ ಆಗರವೇ) ಇದ್ದು, ಈ ಇಲಾಖೆಯಲ್ಲಿ ಕ್ರಮೇಣ ಸುಧಾರಣೆ ಮಾಡುತ್ತಿದ್ದೇನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪ ತಮ್ಮ ಇಲಾಖೆಯ ವಾಸ್ತವತೆಯನ್ನು ಬಿಚ್ಚಿಟ್ಟರು.

ಇಂದು ತಾಲೂಕಿನ ದ್ಯಾಂಪೂರ್ ಗ್ರಾಮದ ಪ್ರೌಢ ಶಾಲಾ ಆರಂಭೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ‘ಶಿಕ್ಷಣ ಇಲಾಖೆಯೂ ಎಲ್ಲಾ ಇಲಾಖೆಗಳಿಂತ ಬಹುದೊಡ್ಡ ಇಲಾಖೆಯಾಗಿದೆ. ಇಂತಹ ಸಂರ್ಭದಲ್ಲಿ ಇಲ್ಲಿ ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ, ಇಡೀ ರಾಜ್ಯದಲ್ಲಿ 46 ಸಾವಿರ ಶಾಲೆಗಳು 57 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹಾಗಾಗಿ ಶಿಕ್ಷಕರ ಕೊರತೆಯೂ ಇದ್ದು, ಜೊತೆಗೆ ಕೇಲವೂ ಸಮಸ್ಯೆಗಳಿವೆ, ಎಲ್ಲವೂ ಅದಷ್ಟೂ ಬೇಗ ಸುಧಾರಣೆಯಾಗಲಿವೆ ಎಂದು ತಿಳಿಸಿದರು.

‘ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತದೆ. ಯಾವುದೇ ಮೂಲಭೂತ ಸೌಕರ್ಯಗಳ ಕೊರತೆ ಇಲ್ಲದೆ ಪ್ರತಿಯೊಂದು ಶಾಲೆಗೆ ಸೌಲಭ್ಯವನ್ನು ನೀಡುತ್ತಿದೆ. ಹಾಗಾಗಿ ಮಕ್ಕಳು ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣವಂತರಾಗಿ, ನಾಡಿನ ಹಾಗೂ ದೇಶದ ಭವಿಷ್ಯ ನಿಮ್ಮ ಮೇಲಿದೆ ಎಂದು ಶಾಲಾ ಮಕ್ಕಳಿಗೆ ಕವಿಮಾತು ಹೇಳಿದರು.

ಈ ವೇಳೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ, ಶ್ರೀಶೈಲ್ ಬಿರಾದಾರ್, ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಪ್ರೌಢ ಶಾಲಾ ಇಲಾಖೆ ಕೊಪ್ಪಳ, ಯಲಬುರ್ಗಾ-ಕುಕನೂರು ಕ್ಷೇತ್ರ ಶೀಕ್ಷಣಾಧಿಕಾರಿ ಸೋಮಶೇಖರ್ ಗೌಡ ಪಾಟೀಲ್, ತಾಲೂಕಾ ಪಂಚಾಯತ ಕಾರ್ಯನಿರ್ವಹಣ ಅಧಿಕಾರಿ ಸಂತೋಷ ಬಿರಾದರ್ ಪಾಟೀಲ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಹಾಗೂ ಕಾಂಗ್ರೆಸ್‌ ಪಕ್ಷದ ಮುಂಡರು, ಶಾಲಾ ಸಿಗ್ಬಂದಿಗಳು ಮಕ್ಕಳು ಭಾಗವಹಿಸಿದ್ದರು.

Leave a Reply

error: Content is protected !!