FLSH NEWS : ಬಲ್ದೋಟ ಕಂಪನಿ ವಿರುದ್ಧ ದನ ಕುರಿ ಸಮೇತ ಹೋರಾಟಕ್ಕಿಳಿದ ರೈತರು ..!!
ಕೊಪ್ಪಳ : ತಾಲೂಕಿನ ಬಸಾಪುರ ಕೆರೆಯನ್ನು ಬಲ್ದೊಟ ಕಂಪನಿ ಅಕ್ರಮಿಸಿರುವುದನ್ನ ಖಂಡಿಸಿ ದನ ಕುರಿ ಸಮೇತ ರೈತರು ಮತ್ತು ಪರಿಸರ ಹೋರಾಟಗಾರರು ಪ್ರತಿಭಟಿಸದರು.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ದನ,ಕುರಿ ಸಾಕಣೆದಾರರು ಹಾಗೂ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಮುಖಂಡರು ದನ ಕುರಿಗಳ ಸಮೇತ ಬೃಹತ್ ಪ್ರತಿಭಟನೆ ಮಾಡಲಾಯಿತು. ಸಾರ್ವಜನಿಕರಿಗೆ ಮತ್ತು ದನ ಕುರಿಗಳಿಗೆ ಬಸಾಪುರ ಕೆರೆಯನ್ನು ಮುಕ್ತವಾಗಿ ಉಪಯೋಗಿಸಲು ಕೋರ್ಟ್ ಆದೇಶವಿದ್ದರೂ ಬಿ ಎಸ್ ಪಿ ಎಲ್ ಬಲ್ದೋಟ ಕಂಪನಿ ಮತ್ತು ಅದರ ಸೆಕುರಿಟಿ ಗಾರ್ಡುಗಳು ತಡೆದು ಸಾರ್ವಜನಿಕರನ್ನು, ದನ, ಕುರಿಗಳನ್ನು ಗೇಟ್ ನಲ್ಲಿ ತಡೆದು ಹೊರಹಾಕುತ್ತಿದ್ದಾರೆ.
ಈ ಕುರಿಗಾಯಿಗಳು ಮತ್ತು ರೈತರು ತಮ್ಮ ದನಕರಗಳನ್ನು ಕೆರೆಯಲ್ಲಿ ನೀರು ಕುಡಿಸಲು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಕಂಪನಿ ಒಳಗೆ ಹೋಗಲು ಮನವಿ ಸಲ್ಲಿಸಿದರು. ಕಂಪನಿಗಳು ಭೂಮಿಯನ್ನು ನುಂಗಿ, ಕೆರೆಗಳನ್ನು ನುಂಗಿ ಅಲ್ಪಸ್ವಲ್ಪ ಜನ ಜಾನುವಾರುಗಳಿಗೆ ದಾರಿಗಳನ್ನು ಬಂದು ಮಾಡಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದೆ.
ಕೊಪ್ಪಳ ತಾಲೂಕಿನಲ್ಲಿ ಬೀಡು ಬಿಟ್ಟಿರುವ ಕಂಪನಿಗಳ ಅಟ್ಟಹಾಸ ಹೇಳತೀರದು. ಬಾಯಿಲ್ಲದ ದನ ಕುರಿಗಳು ಕಂಪನಿ ಬಿಡುವ ಧೂಳು ಹೋಗೆ ಮೇವಿನ ಮೇಲೆ ಬಿದ್ದು ಅದನ್ನು ತಿಂದಂತ ಹಸುಗಳು,ಕುರಿಗಳು ದಿನನಿತ್ಯ ಸಾವನ್ನಪ್ಪುತ್ತಿವೆ. ನದಿ ತೀರಕ್ಕೂ ಮತ್ತು ಹುಲ್ಲುಗಾವಿನ ಪ್ರದೇಶಕ್ಕೆ ಹೋಗಲು ಕಂಪನಿಗಳು ತಮ್ಮ ಕಾಂಪೌಂಡ್ ನಿರ್ಮಾಣ ಮಾಡಿ ರೈತರ ಭೂಮಿಯನ್ನು ಅಕ್ರಮಿಸಿಕೊಂಡಿವೆ. ಇಂಥ ಸಂದರ್ಭದಲ್ಲಿ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಧನ ಕುರಿಗಳಿಗೆ ನೀರು ಉಪಯೋಗಿಸಲು ಮುಕ್ತವಾಗಿ ಇಡಬೇಕೆಂಬ ಹೈಕೋರ್ಟ್ ಆದೇಶವಿದ್ದರೂ ಏಕ ಪಕ್ಷಿಯವಾಗಿ ಕಾಂಪೌಂಡ್ ಕಟ್ಟಿಕೊಂಡು ಸೆಕ್ಯೂರಿಟಿ ಕಾರ್ಡ್ ಗಳ ಮುಖಾಂತರ ಸಾರ್ವಜನಿಕರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ 40,000ಕ್ಕೂ ಹೆಚ್ಚು ಧನ ಕುರಿಗಳನ್ನು ಕಂಪನಿ ಮುಂದೆ ನಿಲ್ಲಿಸಿ ಬೃಹತ್ ಪ್ರತಿಭಟನೆಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಕರೆ ನೀಡಿದೆ.