BREAKING : ಧರ್ಮಸ್ಥಳ ಕೇಸ್: ‘ಸುಪ್ರೀಂ ಕೋರ್ಟ್’ಗೆ ಹರ್ಷೇಂದ್ರ ಹೆಗ್ಗಡೆ ಮೇಲ್ಮನವಿ ಸಲ್ಲಿಕೆ..!!

You are currently viewing BREAKING : ಧರ್ಮಸ್ಥಳ ಕೇಸ್: ‘ಸುಪ್ರೀಂ ಕೋರ್ಟ್’ಗೆ ಹರ್ಷೇಂದ್ರ ಹೆಗ್ಗಡೆ ಮೇಲ್ಮನವಿ ಸಲ್ಲಿಕೆ..!!

BREAKING : ಧರ್ಮಸ್ಥಳ ಕೇಸ್: ‘ಸುಪ್ರೀಂ ಕೋರ್ಟ್’ಗೆ ಹರ್ಷೇಂದ್ರ ಹೆಗ್ಗಡೆ ಮೇಲ್ಮನವಿ ಸಲ್ಲಿಕೆ..!!

ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್ : ಧರ್ಮಸ್ಥಳ ಕೇಸ್ ಕುರಿತಂತೆ ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ಬೆಂಗಳೂರಿನ 16ನೇ ಸಿಸಿಹೆಚ್ ನ್ಯಾಯಾಲಯವು ರದ್ದುಗೊಳಿಸಿತ್ತು. ಅಲ್ಲದೇ ಈ ಸಂಬಂಧದ ಅರ್ಜಿ ವಿಚಾರಣೆ ನಡೆಸುತ್ತಿದ್ದಂತ ನ್ಯಾಯಾಧೀಶರು ಕೂಡ ಈ ಪ್ರಕರಣದಿಂದ ಹಿಂದೆ ಸರಿದಿದ್ದರು ಎನ್ನಲಾಗಿದೆ.

ಇದರ ಬೆನ್ನಲ್ಲೇ ಧರ್ಮಸ್ಥಳ ಪ್ರಕರಣವೂ ಸಂಬಂಧಿಸಿದಂತೆ ಮಾಧ್ಯಮಗಳ ಮೇಲಿನ ತಡೆಯಾಜ್ಞೆ ರದ್ದು ಪ್ರಶ್ನಿಸಿ ಇದೀಗ ಸುಪ್ರೀಂ ಕೋರ್ಟ್ ಗೆ ಹರ್ಷೇಂದ್ರ ಹೆಗ್ಗಡೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೈಕೋರ್ಟ್ “ಕುಡ್ಲ ರಾಂಪೇಜ್” ಎಂಬುವರು ಸಲ್ಲಿಸಿದ್ದಂತ ನಿರ್ಬಂಧಕಾಜ್ಞೆ ತೆರವು ಅರ್ಜಿ ವಿಚಾರಣೆ ನಡೆಸಿ ರದ್ದುಗೊಳಿಸಿತ್ತು. ಕಳೆದ ನಿನ್ನಯಷ್ಟೇ 338 ಜನರ ಮೇಲೆ ತಡೆಯಾಜ್ಞೆಯನ್ನು ಬೆಂಗಳೂರಿನ 16ನೇ ಸಿಸಿಹೆಚ್ ನ್ಯಾಯಾಲಯ ರದ್ದುಗೊಳಿಸಿತ್ತು. ಇದೀಗ ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹರ್ಷೇಂದ್ರ ಹೆಗಡೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಇಂದು ಸಿಜೆಐ ಬಿಆರ್ ಗವಾಯಿ, ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ, ವಿನೋದ್ ಚಂದ್ರ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಪ್ರಸ್ತಾಪಿಸಲಾಯಿತು. ಹರ್ಷೇಂದ್ರ ಪರ ವಕೀಲರು ಸುಮಾರು 8,000 ಯೂಟ್ಯೂಬ್ ಚಾನಲ್‌ಗಳು ಧರ್ಮಸ್ಥಳ ದೇವಸ್ಥಾನದ ವಿರುದ್ಧ ಅವಹೇಳನಕಾರಿ ವಸ್ತು ವಿಷಯ ಭಿತ್ತರಿಸಿರುವ ಬಗ್ಗೆ ವಾದ ಮಂಡಿಸಿದರು.

ಈ ವಾದವನ್ನು ಆಲಿಸಿದಂತ ಸುಪ್ರೀಂ ಚಾರಣೆಯನ್ನು ನಾಳೆಗೆ ಮುಂದೂಡಿದೆ. ನಾಳೆ ಸುಪ್ರೀಂ ಕೋರ್ಟ್ ಯಾವ ಆದೇಶ ಪ್ರಕಟಿಸಲಿದೆ ಎಂದು ಕೂತುಹಲ ಮೂಡಿಸಿದೆ.

Leave a Reply

error: Content is protected !!