LOCAL NEWS : ಶಾಂತಿ ಸೌಹಾರ್ದಯುತ ಬಿಡು ಕೊಪ್ಪಳ, ಗವಿಸಿದ್ದಪ್ಪನ ಹತ್ಯೆ ಅಮಾನುಷವಾದದ್ದು : ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್
ಗವಿಸಿದ್ದಪ್ಪ ನಾಯಕ್ ನಿವಾಸಕ್ಕೆ ಮುಸ್ಲಿಂ ಮುಖಂಡರು ಭೇಟಿ : ಸಾಂತ್ವಾನ
ಕೊಪ್ಪಳ : ಇತ್ತೀಚಿಗೆ ಕೊಲೆಯಾದ ಗವಿಸಿದ್ದಪ್ಪ ನಾಯಕ್ ನಿವಾಸಕ್ಕೆ ಮುಸ್ಲಿಂ ಸಮುದಾಯದ ಮುಖಂಡರು ಭೇಟಿ ನೀಡಿ
ಸಾಂತ್ವಾನ ಹೇಳಿದರು.
ಪುತ್ರನ ಕಳೆದುಕೊಂಡ ಕುಟುಂಬಕ್ಕೆ ಸಾಂತ್ವಾನ ಹೇಳಿ ಈ ಘಟನೆಗೆ ಕಾರಣರಾದವರಿಗೆ ಶಿಕ್ಷೆಯಾಗಲಿ, ನಾವು ಸಹ ಗವಿಸಿದ್ದಪ್ಪ ನಾಯಕ್ ಕುಟುಂಬದೊಂದಿಗೆ ಇದ್ದೇವೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಈ ಘಟನೆಗೆ ಕಾರಣರಾದವರಿಗೆ ಶಿಕ್ಷೆ ಆಗಲಿ ನಿಮ್ಮೊಂದಿಗೆ ನಾವು ಸಹ ಹೋರಾಟ ಮಾಡುತ್ತೇವೆ. ಮೊದಲಿನಿಂದಲೂ ಕೊಪ್ಪಳ ಶಾಂತಿ ಸೌಹಾರ್ದಯುತವಾಗಿದೆ. ಕೊಲೆಯಂಥ ಘಟನೆಯನ್ನು ನಾವು ಸಹ ಖಂಡಿಸುತ್ತೇವೆ ಮೃತನ ಕುಟುಂಬದೊಂದಿಗೆ ಮುಸ್ಲಿಂ ಸಮಾಜವಿದೆ ಎಂದರು.
ಇದೇ ವೇಳೆ ಮಾತನಾಡಿದ ಮುಸ್ಲಿಂ ಸಮಾಜದ ಮುಖಂಡ ಪಾಷಾ ಕಾಟನ್ ಈ ಘಟನೆಯ ನಂತರ ಇಡೀ ನಗರದ ಜನ ನಿದ್ರೆಯಿಲ್ಲದೆ ಒದ್ದಾಡಿದೆ. ಕೊಲೆ ಮಾಡಿರುವ ಹುಡುಗರ ಡ್ರಗ್ ಸೇವನೆ ಮಾಡಿರುವ ಶಂಕೆ ಇದೆ. ಇದರಿಂದ ಯುವಜನರು ಹಾದಿ ತಪ್ಪುತ್ತಿದ್ದಾರೆ. ಡ್ರಗ್ ಮಾರಾಟ ತಡೆಯಬೇಕೆಂದು ಪೊಲೀಸರಿಗೆ ಒತ್ತಾಯಿಸುತ್ತೇವೆ ಈ ಘಟನೆಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.