ರಾಯರೆಡ್ಡಿ ಮಾಡಿದಷ್ಟು ಕೆಲಸವನ್ನು ನಾನು ಸಹ ಮಾಡಿಲ್ಲ: ಸಿದ್ದರಾಮಯ್ಯ.

You are currently viewing ರಾಯರೆಡ್ಡಿ ಮಾಡಿದಷ್ಟು ಕೆಲಸವನ್ನು ನಾನು ಸಹ ಮಾಡಿಲ್ಲ:  ಸಿದ್ದರಾಮಯ್ಯ.

ಕುಕನೂರು : ಬಸವರಾಜ ರಾಯರೆಡ್ಡಿ ಒಬ್ಬ ಉತ್ತಮ ಜ್ಞಾನವುಳ್ಳ ಅನುಭವಿ ರಾಜಕಾರಣಿಯಾಗಿದ್ದಾನೆ ರಾಯರೆಡ್ಡಿ ಮಾಡಿದಷ್ಟು ಕೆಲಸವನ್ನು ಸಹ ನಾನು ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಟ್ಟಣದ ವಿದ್ಯಾನಂದ ಗುರುಕುಲ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಬಸವರಾಜ ರಾಯರೆಡ್ಡಿ ಒಬ್ಬ ಉತ್ತಮ ಜ್ಞಾನಗಿದ್ದು ಹಣಕಾಸಿನಲ್ಲಿ ಸಾಕಷ್ಟು ಅನುಭವವಿದೆ, ನಾನು ಮುಖ್ಯಮಂತ್ರಿ ಆಗಿ ಹತ್ತು ಹನ್ನೆರಡು ಸಲ ಬಜೆಟ್ ಮಂಡನೆ ಮಾಡಿದರು ಸಹ ರಾಯರೆಡ್ಡಿಯಿಂದ ಬಜೆಟ್ ಕುರಿತು ಮಾಹಿತಿಯನ್ನು ಪಡೆಯುತ್ತೇನೆ. ಅಷ್ಟು ಜ್ಞಾನವುಳ್ಳ ವ್ಯಕ್ತಿಯನ್ನು ನೀವು ಈ ಹಿಂದೆ ಯಾಕೆ ಸೋಲಿಸಿದ್ದೀರಿ ಎಂಬುದು ನನಗೆ ತಿಳಿಯುತ್ತಿಲ್ಲ. ಅವರು ಯಲಬುರ್ಗಾ ಕ್ಷೇತ್ರಕ್ಕೆ ಸಂಕಷ್ಟಿ ಕೆಲಸಗಳನ್ನು ಮಾಡಿದ್ದಾರೆ. ರಾಯರೆಡ್ಡಿ ಮಾಡಿದಷ್ಟು ಕೆಲಸವನ್ನು ನಾನು ಸಹ ಮಾಡಿಲ್ಲ. ಅಭಿವೃದ್ಧಿಗಾಗಿ ಚಿಂತನೆಯುಳ್ಳ ವ್ಯಕ್ತಿಯನ್ನು 2023ರ ಚುನಾವಣೆಯಲ್ಲಿ ತಮ್ಮ ಪ್ರಚಂಡ ಬಹುಮತದಿಂದ ಆರಿಸಿ ತರಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಒಂದೇ ಮಾತರಂ ಗೀತೆಯ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವರಾಯ ರೆಡ್ಡಿ ಮಾತನಾಡಿ ಇತ್ತೀಚಿನ ದಿನಮಾನಗಳಲ್ಲಿ ರಾಜಕೀಯ ಎಂಬುದು ಅವ್ಯವಸ್ಥೆಯ, ದ್ವೇಷದ ರಾಜಕಾರಣದಿಂದ ಕೂಡಿದೆ. ಅಭಿವೃದ್ಧಿ ಮಾತುಗಳಿಲ್ಲದೆ ಕೇವಲ ಜಾತಿ ಮತ ಪಂಥ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ನಾನು ಸಾಕಷ್ಟು ಬೇಜಾರಾಗಿದ್ದು ಇಂತಹ ರಾಜಕೀಯದಲ್ಲಿ ಇರಲು ನನಗೆ ಇಷ್ಟವಿಲ್ಲ. ಆದರೆ ನಮ್ಮ ಹಿರಿಯರಾದ ಸಿದ್ದರಾಮಯ್ಯನವರ ವ್ಯಕ್ತಿತ್ವ ಸರಳತೆ ಹಾಗೂ ಅವರ ನಾಯಕತ್ವದ ಗುಣದಿಂದಾಗಿ ನಾನು ನಿಮ್ಮ ಜೊತೆ ಇದ್ದೇನೆ ಇಲ್ಲವಾದರೆ ರಾಜಕೀಯದಿಂದ ದೂರ ಉಳಿಯುತ್ತಿದ್ದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಾಸಕ ಸತೀಶ್ ಜಾರಕಿಹೊಳಿ , ಅಮರೇಗೌಡ ಬಯ್ಯಾಪುರ, ಸುರೇಶ್ ರಾಥೋಡ್, ಹನುಮಂತಗೌಡ ಪಾಟೀಲ್, ಬಸವರಾಜ್ ಉಳ್ಳಾಗಡ್ಡಿ, ಯಾಂಕಣ್ಣ ಯರಾಶಿ, ವೀರನಗೌಡ ಪೊಲೀಸ್ ಪಾಟೀಲ್, ಸಿದ್ದಯ್ಯ ಕಳ್ಳಿ ಮಠ, ರತ್ನಾಕರ ತಳವಾರ್ ಹಾಗೂ ಯಲಬುರ್ಗಾ ಕುಕುನೂರು ಬ್ಲಾಕ್ ಕಾಂಗ್ರೆಸ್ ವಿವಿಧ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.

Leave a Reply

error: Content is protected !!