ಕುಕನೂರು :ಯಲಬುರ್ಗಾ ಬಿಜೆಪಿ ಯುವ ಘಟಕದ ಸಾಮಾಜಿಕ ಜಾಲತಾಣವಾದ ಪೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚೆರ್ಚೆಗೆ ಕಾರಣವಾಗಿದೆ.
ಹೌದು, ಏ.16 ರಂದು ಯಲಬುರ್ಗಾ ಕ್ಷೇತ್ರದ ಮಾಜಿ ಶಾಸಕ ಈಶಣ್ಣ ಗುಳಗಣ್ಣನವರ ಪ್ರಥಮ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಮಾಜಿ ಶಾಸಕ ಹಾಗೂ ಮಾಜಿ ಮಂತ್ರಿಯಾದ ಬಸವರಾಜ ರಾಯರೆಡ್ಡಿ ಹಾಗೂ ಅವರು ಬೆಂಬಲಿಗರು ಸೇರಿ ಅವರ ಇಟಗಿ ಗ್ರಾಮದ ಗುಳಗಣ್ಣನವರ ಮನೆಗೆ ಭೇಟಿ ನೀಡಿ ಈಶಣ್ಣ ಗುಳಗಣ್ಣನವರಿಗೆ ಗೌರವ ಸಲ್ಲಿಸಿ ಕುಟುಂಬಸ್ಥರೊಂದಿಗೆ ಸಮಾಲೋಚನೆ ನೆಡೆಸಿದ್ದಾರೆ ಎಂದು ಹೇಳಲಾಗುತ್ತಿದ್ದೆ. ಇದನ್ನೇ ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ರಾಯರಡ್ಡಿ ಅವರ ಪೋಟೋ ಬಳಕೆ ಮಾಡಿಕೊಂಡು “ತೀರಿಕೊಂಡಾಗ ಬಾರದೆ ತಿಥಿ ಊಟಕ್ಕೆ ಬಂದ ಸಮಯ ಸಾಧಕ” ಅಂತ ಪೋಸ್ಟ ಹಾಕಲಾಗಿದ್ದು, ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚೆರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಈ ಪೋಸ್ಟ ಪರ ಹಾಗೂ ವಿರೋಧವಾಗಿಯೂ ಸಹ ಫೇಸ್ ಬುಕ್‌ನಲ್ಲಿ ಬೆಜೆಪಿ ಕಾಂಗ್ರೆಸ್ ನಡುವೆ ಕಾಮೆಂಟ್‌ಗಳ ವಾರ್ ಪ್ರಾರಂಭವಾಗಿದೆ.
ಪುಣ್ಯತಿಥಿಯಂತಹ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಚಿವರನ್ನು ಬಿಜೆಪಿಯ ಸಾಮಾಜಿಕ ಜಾಲತಾಣ ಈ ರೀತಿಯಾಗಿ ಟೀಕೆ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಹಾಗೂ ಈಶಣ್ಣ ಗುಳಗಣ್ಣನವರ ಮಗನಾದ ನವೀನ್ ಗುಳಗಣ್ಣನವರು ಈ ಕುರಿತು ಯಾವ ರೀತಿಯ ಪ್ರತಿಕ್ರಿಯೇ ನೀಡುತ್ತಾರೋ ಕಾದು ನೋಡಬೇಕಿದೆ.
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚೆರ್ಚೆಗೆ ಗ್ರಾಸವಾದ ಬೆಜೆಪಿ ಜಾಲತಾಣದ ಪೋಸ್ಟ.
