You are currently viewing LOCAL EXPRESS “ಕುಕನೂರ | ಮಂಗಳೂರಲ್ಲಿ ಗ್ರಾಮದಲ್ಲಿ ಯೂರಿಯಾ ಗೊಬ್ಬರ ಕೊರತೆ :  ರೈತ ಸಂಪರ್ಕ ಕೇಂದ್ರ ಬಂದ್‌ ಮಾಡಿ  ರೈತರ ಪ್ರತಿಭಟನೆ”

LOCAL EXPRESS “ಕುಕನೂರ | ಮಂಗಳೂರಲ್ಲಿ ಗ್ರಾಮದಲ್ಲಿ ಯೂರಿಯಾ ಗೊಬ್ಬರ ಕೊರತೆ :  ರೈತ ಸಂಪರ್ಕ ಕೇಂದ್ರ ಬಂದ್‌ ಮಾಡಿ  ರೈತರ ಪ್ರತಿಭಟನೆ”

“ಕುಕನೂರ| ಮಂಗಳೂರಲ್ಲಿ ಗ್ರಾಮದಲ್ಲಿ ಯೂರಿಯಾ ಗೊಬ್ಬರ ಕೊರತೆ :  ರೈತ ಸಂಪರ್ಕ ಕೇಂದ್ರ ಬಂದ್‌ ಮಾಡಿ ,ರೈತರ ಪ್ರತಿಭಟನೆ”

ಪ್ರಜಾವೀಕ್ಷಣೆ ಡೆಸ್ಕ್‌ ನ್ಯೂಸ್ :

 

ಕೊಪ್ಪಳ : ಜಿಲ್ಲೆಯ ಕುಕನೂರ ತಾಲೂಕಿನ ಮಂಗಳೂರು ಗ್ರಾಮದ ರೈತ ಸಂಪರ್ಕ ಕೇಂದ್ರದ ಮುಂಭಾಗದಲ್ಲಿ ಮಂಗಳೂರು ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ರೈತ ಸಂಪರ್ಕ ಕೇಂದ್ರದ ಕಚೇರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಯಲಬುರ್ಗಾ ತಾಲೂಕ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ಅವರು ಭೇಟಿ ಮಾಡಿ ರೈತರೊಂದಿಗೆ ಮಾತನಾಡಿ, ಮೂರು ನಾಲ್ಕು ದಿನಗಳ ಒಳಗಾಗಿ ಸಮರ್ಪಕ ರಸಗೊಬ್ಬರ ಪೂರೈಸುವುದಾಗಿ ಈ ಸಂದರ್ಭದಲ್ಲಿ ನೆರೆದಿದ್ದ ರೈತರಿಗೆ ಭರವಸೆ ನೀಡಿದರು. ಬಳಿಕ ಅಧಿಕಾರಿಗಳ ಮಾತಿಗೆ ರೈತರು ಗೌರವ ಕೊಟ್ಟು ಪ್ರತಿಭಟನೆಯನ್ನು ಹಿಂಪಡೆದರು.

ಈ ಸಂದರ್ಭದಲ್ಲಿ ಮಂಗಳೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಿಂಗಪ್ಪ ಹಿರೇಹಾಳ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಪ್ಪ ಹ್ಯಾಟಿ, ನಿರ್ದೇಶಕರಾದ ಮಹಾಲಿಂಗಯ್ಯ ಕಲ್ಮಠ, ಗಂಗಾಧರ ಬಡಿಗೇರ, ಲಿಂಗರಾಜ ವಿವೇಕಿ, ಸಿಇಓ ಹನಮಗೌಡ್ರ ಈಳಗೇರ ಮತ್ತು  ಸಿಬ್ಬಂದಿ ವರ್ಗದವರು, ರೈತರಾದ ಮಂಗಳೇಶಪ್ಪ ಬಗನಾಳ, ಶಂಕ್ರಗೌಡ್ರ ಕೀರ್ತಗೌಡ್ರ, ಗವಿಸಿದ್ದಯ್ಯ ಅರಳಲೆಹಿರೇಮಠ, ಮುತ್ತಣ್ಣ ಬಾರಿನರ, ದುರುಗೇಶ ಹಳ್ಳಿ, ಮಂಗಳೇಶಪ್ಪ ಕಿನ್ನಾಳ, ರವೀಂದ್ರನಾಥ ಕೊಟ್ರಪ್ಪ ತೋಟದ,ಶಿವಪುತ್ರಪ್ಪ ಪೂಜಾರ, ಪುತ್ರಪ್ಪ ಕುದ್ರಿಮೋತಿ, ಖಾಜಾಸಾಬ ನೂರಭಾಷ, ಮಲ್ಲಪ್ಪ ಎಮ್ಮಿ,ಮಂಗಳಪ್ಪ ಕುಂಬಾರ,ಖಾಜಾಸಾಬ ಹಂಚಿನಾಳ,ಮುತ್ತಣ್ಣ ತಳವಾರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Prajavikshane

Chandru R Bhanapaur

Leave a Reply

error: Content is protected !!