ತೆಲಂಗಾಣ| ಗಣೇಶ್ ಮೂರ್ತಿ ತರುವಾಗ ಹೈಟೆನ್ಶನ್ ವಿದ್ಯುತ್ ತಗಲಿ ಅವಘಡ : ಹತ್ತಕ್ಕೂ ಹೆಚ್ಚು ಗಣಪತಿ ಭಕ್ತರ ಸಾವು! ಸೋಶಿಯಲ್ ಮೀಡಿಯಾದಲ್ಲಿ ವೈರಲ್..!
ಪ್ರಜಾವೀಕ್ಷಣೆ ಡೆಸ್ಕ್ ನ್ಯೂಸ್ :
ಹೈದರಾಬಾದ್: ಗಣೇಶ ಮೂರ್ತಿಯನ್ನು ವಾಹನದಲ್ಲಿ ಪ್ರತಿಷ್ಠಾಪನೆಗೆಂದು ತರುವಾಗ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಹತ್ತಕ್ಕೂ ಹೆಚ್ಚು ಜನ ಮೃತಪಟ್ಟಿರುವ ಘಟನೆ ತೆಲಂಗಾಣ ರಾಜ್ಯದ ಹೈದರಾಬಾದ್‌ನ ಕರೀಮ ನಗರ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿರುವದು ಬೆಳಕಿನ ಬಂದಿದೆ.
ರಾತ್ರಿ 1 ಗಂಟೆಯ ವೇಳೆಗೆ ಘಟನೆಯು ನಡೆದಿದೆ ಎಂದು ತಿಳಿದು ಬಂದಿದೆ. ನಗರದ ಹೋಟೆಲ್‌ವೊಂದರ ಬಳಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲೆಂದು ಸಾಗಿಸುವಾಗ ಆಕಸ್ಮಿಕವಾಗಿ ನಡೆದಿದೆ ಎಂದು ಹೈದ್ರಾಬಾದ ಹತ್ತಿರ ಬರುವ ಬಂಡ್ಲಗುಡ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೈಟೆನ್ಶನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಹತ್ತು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಂತಿಗಳನ್ನು ಎತ್ತಲು ಪ್ರಯತ್ನ:
ಗಣೇಶ ಮೂರ್ತಿ ದೊಡ್ಡದಾಗಿದ್ದು, ಅದರ ಮಾರ್ಗಕ್ಕೆ ಅಡ್ಡಿಯಾಗಿದ್ದ ಓವರ್ಹೆಡ್ ವಿದ್ಯುತ್ ತಂತಿಗಳನ್ನು ಮೂರ್ತಿ ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ತಂತಿ ತಾಗುವುದನ್ನು ತಪ್ಪಿಸಲು, ಜನರು ಕೋಲಿನಿಂದ ಎತ್ತಲು ಪ್ರಯತ್ನಿಸಿದ್ದರು. ದುರದೃಷ್ಟವಶಾತ್, ಕೋಲು ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಆಘಾತ ಉಂಟಾಯಿತು.
ಈ ಘಟನೆಗಳ ಬೆನ್ನಲ್ಲೇ ಅಧಿಕಾರಿಗಳು ವಿಗ್ರಹ ಮೆರವಣಿಗೆಗಳ ಸಂದರ್ಭದಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಘಟಕರು ಮತ್ತು ಭಕ್ತರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.