ಕುಷ್ಟಗಿ : ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಡುವೆ ಕುಷ್ಟಗಿ ತಾಲ್ಲುಕಿನ ನಿಡಶೇಸಿ ಗ್ರಾಮದ ಬಳಿ ಆಟೋ ಪಲ್ಟಿಯಾಗಿ ವೃದ್ದೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಶುಕ್ರವಾರ ಈ ದುರ್ಘಟನೆ ನಡೆದಿದ್ದು, ಕುಷ್ಟಗಿಯ ನಿವಾಸಿ ಶಿವಮ್ಮ ಶಂಕ್ರಪ್ಪ ವಯಸ್ಸು 65 ಎಂದು ಗುರುತಿಸಲಾಗಿದೆ.
ಕುಷ್ಟಗಿ ಪಟ್ಟಣದಿಂದ ನಿಡಶೇಸಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಶಿವಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ವಿಷಯ ತಿಳಿದು ಸ್ಥಳಕ್ಕೆ ಕುಷ್ಟಗಿ ಪಟ್ಟಣದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.