You are currently viewing LOCAL NEWS : “ಕೊಪ್ಪಳ | “ಅಲೆಮಾರಿಗಳಿಗೆ ಪ್ರತ್ಯೇಕ ಶೇ.1ರಷ್ಟು ಮೀಸಲಾತಿ ಕೊಡಿ.! ಇಲ್ಲವೆಂದರೆ  ಕೂಡಲೇ ನಿಮ್ಮ ಖುರ್ಚಿ ಖಾಲಿ ಮಾಡಿ : ರಾಜ್ಯ ಸರ್ಕಾರಕ್ಕೆ ಸಂಜಯದಾಸ್‌ ಕೌಜಗೇರಿ ಎಚ್ಚರಿಕೆ”

LOCAL NEWS : “ಕೊಪ್ಪಳ | “ಅಲೆಮಾರಿಗಳಿಗೆ ಪ್ರತ್ಯೇಕ ಶೇ.1ರಷ್ಟು ಮೀಸಲಾತಿ ಕೊಡಿ.! ಇಲ್ಲವೆಂದರೆ  ಕೂಡಲೇ ನಿಮ್ಮ ಖುರ್ಚಿ ಖಾಲಿ ಮಾಡಿ : ರಾಜ್ಯ ಸರ್ಕಾರಕ್ಕೆ ಸಂಜಯದಾಸ್‌ ಕೌಜಗೇರಿ ಎಚ್ಚರಿಕೆ”

” ಕೊಪ್ಪಳ | ಅಲೆಮಾರಿಗಳಿಗೆ ಪ್ರತ್ಯೇಕ ಶೇ.1ರಷ್ಟು ಮೀಸಲಾತಿ ಕೊಡಿ.! ಇಲ್ಲವೆಂದರೆ  ಕೂಡಲೇ ನಿಮ್ಮ ಖುರ್ಚಿ ಖಾಲಿ ಮಾಡಿ : ರಾಜ್ಯ ಸರ್ಕಾರಕ್ಕೆ ಸಂಜಯದಾಸ್‌ ಕೌಜಗೇರಿ ಎಚ್ಚರಿಕೆ”

 

ಪ್ರಜಾ ವೀಕ್ಷಣೆ  ಡೆಸ್ಕ್‌ ನ್ಯೂಸ್‌ : 

ಕೊಪ್ಪಳದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳು ಗತಿಸಿದರೂ  ಸಹ ಅಲೆಮಾರಿ ಸಮುದಾಯಗಳಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಈಗಲೂ ಅಲೆಮಾರಿಗಳು ಗುಡಿಸಲು, ಟೆಂಟ್‌, ಜೋಪಡಿಗಳಲ್ಲಿ ಯಾವುದೇ ಸೌಕರ್ಯ ಇಲ್ಲದೇ ಬದುಕುತ್ತಿದ್ದಾರೆ. ಅಲೆಮಾರಿಗಳು ಇಂದಿಗೂ ಅನಕ್ಷರಸ್ಥರಾಗಿಯೇ ಉಳಿದಿದ್ದಾರೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸರ್ಕಾರ ಮತ್ತೇ ಅನ್ಯಾಯ ಮಾಡಿದೆ. ಈ ಅನ್ಯಾಯ ಸರಿಪಡಿಸದಿದ್ದರೆ  ಮತ್ತೇ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ರಾಜ್ಯ ಒಳಮೀಸಲಾತಿ ಹೋರಾಟ ಸಮಿತಿ ಸದಸ್ಯ, ರಾಜ್ಯ ಅಲೆಮಾರಿ ಎಸ್ಸಿ, ಎಸ್ಟಿ ಬುಡಕಟ್ಟು ಮಹಾ ಸಭಾದ ಕೊಪ್ಪಳ ಜಿಲ್ಲಾಅಧ್ಯಕ್ಷ  ಸಂಜಯ್ ದಾಸ್ ಕೌಜಗೇರಿ ಅವರು ಎಚ್ಚರಿಕೆ ನೀಡಿದರು.

 ಈ ಕುರಿತು ಭಾನುವಾರ ಪತ್ರಿಕಾ  ಹೇಳಿಕೆ ನೀಡಿರುವ ಅವರು , ‘ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಆಯೋಗವು ಅಲೆಮಾರಿಗಳಿಗೆ ಪ್ರತ್ಯೇಕ ಶೇ 1 ಮೀಸಲಾತಿ ಶಿಫಾರಸು ಮಾಡಿದೆ. ಆದರೆ, ಮುಖ್ಯಮಂತ್ರಿ ಅಧ್ಯಕ್ಷತೆಯ ಸಚಿವ ಸಂಪುಟದಲ್ಲಿ ಶೇ 1 ಮೀಸಲಾತಿಯನ್ನು ಬಲಾಢ್ಯ ಸಮುದಾಯಗಳ ಜತೆಗೆ ಸಿ ಗ್ರೂಪ್‍ನಲ್ಲಿ ಸೇರಿಸಿದ್ದು ಖಂಡನೀಯ. ಅದನ್ನು ಪ್ರತ್ಯೇಕಿಸಿ ಅಸ್ಪೃಶ್ಯ ಸಂಬಂಧಿತ ಅಲೆಮಾರಿಗಳಿಗೆ ವಿಶೇಷವಾಗಿ ಶೇ 1ರಷ್ಟು ಮೀಸಲಾತಿ ನೀಡಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿದರು.

ಸಂವಿಧಾನದ ಆಶಯದಂತೆ, ಮೂಲಭೂತ ಸೌಲಭ್ಯಗಳಿಂದ ವಂಚಿತರಾದ, ಅಲೆಮಾರಿಗಳಾದ ನಾವುಗಳು ಆದೇಶ ಬಿಟ್ಟು ಬೇರೇನೂ ಕೇಳುತ್ತಿಲ್ಲ, ನಾವುಗಳು ಬೇಡುತ್ತಿರೋದು, ಭಿಕ್ಷೆಯಲ್ಲ ನೀವುಗಳು ಕೊಡುತ್ತಿರೋದು ಭಿಕ್ಷೆಯನ್ನಲ್ಲ,ನಾವುಗಳು ಕೇಳುತ್ತಿರೋದು ನಮ್ಮಮ ಮೂಲಭೂತ ಹಕ್ಕು ಎಂದರು.

   ರಾಜ್ಯದ ಸಮಸ್ತ ಅಲೆಮಾರಿಗಳಿಗೆ ವಂಚಿತವಾಗುತ್ತಿರುವ  59 ಸಮುದಾಯದ ಅಸ್ಪೃಶ್ಯ ವರ್ಗದ ಪ್ರತ್ಯೇಕ, ಶೇ. 1% ರಷ್ಟು ಒಳ ಮೀಸಲಾತಿ ಲಂಬಾಣಿ, ಭೋವಿ, ಕೊರಮ, ಕೊರಚ, ನಮ್ಮಿಂದ ಬೇರ್ಪಡಿಸಿ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ವರದಿ ಪ್ರಕಾರ  ಜಾರಿಗೆ ತರದೇ ಹೋದರೆ, ಕೊಪ್ಪಳ ಜಿಲ್ಲೆಯಿಂದ ನಾವುಗಳು ಕೂಡಾ ಸರಕಾರಕ್ಕೆ ಒಂದು  ಎಚ್ಚರಿಕೆ ಕೊಡಲು ಬಯಸುತ್ತೇವೆ.  ರಾಜ್ಯದಲ್ಲಿ ಇನ್ನು ಮುಂದೆ ಮುಂಬರುವ ಯಾವುದೇ ಚುನಾವಣೆ ಇರಲಿ, ಅಲೆಮಾರಿಗಳಿಂದ ರಾಜ್ಯವ್ಯಾಪಿ ಚುನಾವಣಾ  ಬಹಿಷ್ಕಾರ  ಮಾಡಲು ಕಠಿಣ ತೀರ್ಮಾನ  ತೆಗೆದುಕೊಳ್ಳುತ್ತೇವೆ ಎಂದು ಹೇಳೀದರು.

ದಯವಿಟ್ಟು ನಮ್ಮ ಕಡೆ ನೋಡಿ ನಮ್ಮ ಕೂಗಿಗೆ ಸ್ಪಂದನೆ ನೀಡಿ ಎಂದು ಪ್ರಕಟಣೆ ಮೂಲಕ ಸಮುದಾಯದ ಮುಖಂಡರಾದ  ಉಪಾಧ್ಯಕ್ಷ  ಬಸವರಾಜ್ ವಿಭೂತಿಗೌರವ ,ಶಿವಣ್ಣ ಒಂಟೆತ್ತಿನವರ, ಶೇಷಣ್ಣಶಹಪುರ, ರಾಮಲಿಂಗಯ್ಯ ,ದೇವಿಕಾ ವಿಠಲ್ ದಾಸರ , ಅನುಷ್ಕಾ ಲೋಹಿತ್,  ಅಕ್ಕಮ್ಮ ಹೆಬಸೂರ,  ಶಾಸ್ತ್ರಿಮಠ  ಮತ್ತು ನಿಂಗು ಬೆಣಕಲ್, ಲಲಿತಾ ಗಬ್ಬುರ , ಸುರಿಕೆಯ್ಯ ಬಳ್ಳಾರಿ, ಕಾಶಪ್ಪ ಚಲವಾ, ಕೃಷ್ಣವೇಣಿ ಚೆನ್ನದಾಸರ್  ಅವರು  ಮನವಿ ಮಾಡಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!