ಸಮಾಜ ಸೇವೆಯಲ್ಲಿ ರಾಘವೆಂದ್ರ ಕುದುರಿ ಅವರಿಗೆ ಒಲಿದ ರಾಷ್ಟ್ರಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ..

ಮುದಗಲ್ಲ ವರದಿ..
ಸಮಾಜ ಸೇವೆಯಲ್ಲಿ ರಾಘವೆಂದ್ರ ಕುದುರಿ ಅವರಿಗೆ ಒಲಿದ  ರಾಷ್ಟ್ರ ಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ..
ಮುದಗಲ್ಲ:- ಸಮಾಜ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಾಘವೇಂದ್ರ ನಾಗರಾಜ ಕುದುರಿ ಇವರನ್ನು ರಾಷ್ಟ್ರಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಬೆಳಕು ಸಾಂಸ್ಕೃತಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್
ವತಿಯಿಂದ ಕನ್ನಡ ನಾಡು-ನುಡಿ, ಸಂಗೀತ, ಕಲೆ, ಶಿಕ್ಷಣ ಸಂಘಟನೆ, ಹೀಗೆ ವಿವಿಧ ಲಲಿತ ಕಲಾ ಪ್ರಕಾರ ಗಳಲ್ಲಿನ ಸಾಧಕರನ್ನು ಆಯ್ಕೆ ಮಾಡಲಾಗುತ್ತಿದೆ.
ಐತಿಹಾಸಿಕ ಪಟ್ಟಣದ ರಾಘವೇಂದ್ರ ನಾಗರಾಜ ಕುದುರಿ ಅವರ ಸಮಾಜ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ
ಇವರನ್ನು ಸಾಹಿತ್ಯ, ಸಂಸ್ಥೆಯ 120ನೇ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನ ಕಾರ್ಯಕ್ರಮದಲ್ಲಿ  ಸೆ. 21ರಂದು ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜರುಗುತ್ತಿರುವ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನದಲ್ಲಿ
ರಾಷ್ಟ್ರಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ ನೀಡಲಾಗುವುದು ಎಂದು ಬೆಳಕು ಸಂಸ್ಥೆಯ ಸಂಸ್ಥಾಪಕ ಅಣ್ಣಪ್ಪ ಮೇಟಿ ತಿಳಿಸಿದ್ದಾರೆ.
 ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!