ಮುದಗಲ್ಲ:-ಮುಂದುವರಿದ ಮಳೆ: ಮನೆ ಗೊಡೆ ಕುಸಿತ..

ಮುದಗಲ್ಲ ವರದಿ…

ಮುಂದುವರಿದ ಮಳೆ: ಮನೆ ಗೊಡೆ ಕುಸಿತ..

ಮುದಗಲ್ಲ :- ಎಡೆಬಿಡದೆ ಸುರಿಯುತ್ತಿರುವ ಮಳೆಯು ಕೆಲವೊಮ್ಮೆ ರಭಸವಾಗಿ ಬೀಳುತ್ತಿರುವ ಮಳೆಯಿಂದಾಗಿ ಮನೆಯ ಹಿಂದಿನ ಗೋಡೆಗಳು ಕುಸಿದು ಬಿದ್ದಿವೆ.

ಪಟ್ಟಣದ ಕಿಲ್ಲಾನಿವಾಸಿಯಾದ ವಾರ್ಡ್ ನಂಬರ್ 18 ಸಂದಾನಂದ ತಂದೆ ಪಂಚಾಕ್ಷರಿ ಹಿರೇಮಠ ರವರ ಮನೆ ಎಂಬುವರ ಮನೆ ಶೇ 70ರಷ್ಟು ಕುಸಿದು ಬಿದ್ದಿದೆ. ಮನೆಯಲ್ಲಿ ಒಬ್ಬರು ಹೆಣ್ಣು ಮಗು ಹಾಗೂ ಒಬ್ಬರು ಗಂಡು ಮಗು ಶಾಲೆಗೆ ಹೋಗುವ ಮಕ್ಕಳಿದ್ದು , ಸದ್ಯ ಕುಟುಂಬ ಮನೆ ಇಲ್ಲದೆ ಕಂಗಾಲಾಗಿದೆ.

ತಡ ರಾತ್ರಿ ಸುರಿದ ಭಾರಿ ಮಳೆಯಿಂದ ಯಾವುದೇ ಅನಾಹುತ ಸಂಭವಿಸಿದೆ ಎಂದು ತಿಳಿದುಬಂದಿದೆ ಅಲ್ಲದೆ ಇವರ ಮನೆಯು ಹಿಂಬಾಗದ ಸಂಪೂರ್ಣ ಗೊಡೆ ಬಿದ್ದಿದ್ದು ಇವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸಂಬಂಧ ಪಟ್ಟ ಸ್ಥಳೀಯ ಹಾಗೂ ಮೇಲಾಧಿಕಾರಿ ಗಳಿಗೆ ಸೂಕ್ತ ಪರಿಹಾರ ನೀಡಬೇಕು

ಸರಕಾರ ನಮಗೆ ಪರಿಹಾರ ನೀಡಬೇಕು ಅಥವಾ ಮನೆಯನ್ನಾದರೂ ನಿರ್ಮಿಸಿಕೊಡಬೇಕು ಎಂದು ಸಂತ್ರಸ್ತ ಸಂದಾನಂದ ತಂದೆ ಪಂಚಾಕ್ಷರಿ ಹಿರೇಮಠ ಅವರು ಪತ್ರಿಕೆ ಮುಖಾಂತರ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ವಾಡಿಕೆಗೂ ಮೀರಿ ಮಳೆ ಆಗುತ್ತಿರುವುದರಿಂದ ಮುದಗಲ್ಲ ಪಟ್ಟಣದ ಸಂದಾನಂದ ತಂದೆ ಪಂಚಾಕ್ಷರಿ ಹಿರೇಮಠ ಅವರಿಗೆ ಸೇರಿದ ಮನೆಯ ಮೇಲೆಯ ಗೊಡೆ ಯು ಸಂಪೂರ್ಣ ಕುಸಿದು ಬಿದ್ದಿದೆ.

ವರದಿ: ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!