ಮುದಗಲ್ಲ: ರವಿ ಕಟ್ಟಿಮನಿಗೆ ಸೇವಾ ರತ್ನ ಪ್ರಶಸ್ತಿ …

ಮುದಗಲ್ಲ ವರದಿ..

ಮುದಗಲ್ಲ: ರವಿ ಕಟ್ಟಿಮನಿಗೆ ಸೇವಾ ರತ್ನ ಪ್ರಶಸ್ತಿ …

 ರವಿ ಕಟ್ಟಿಮನಿ ಸೇವಾ ರತ್ನ ಪ್ರಶಸ್ತಿ ನೀಡಿದ್ದಕ್ಕೆ ಜಾಗೃತಿ ಟ್ರಸ್ಟ್‌ ಅಧ್ಯಕ್ಷರಾದ ಬಿ. ನಾಗೇಶ ಅಭಿನಂದನೆ..

ಮುದಗಲ್‌: ಮೂವತ್ತಕ್ಕೂ ಅಧಿಕ ಸಲ ರಕ್ತದಾನ ಮಾಡುವದ ಜೊತೆಗೆ ಮೂಖ ಪ್ರಾಣಿಗಳಿಗೆ (ಪತ್ರಿ ವಷ೯ ನೂರಾರು ಕೋತಿಗಳಿಗೆ )ಹಸಿವು ನಿಗಿಸುವ ಕೆಲಸ ಮಾಡಿರುವ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಮುದಗಲ್ಲ ಪಟ್ಟಣದ ನವಭಾರತ ಹಿಂದೂ ದಲಿತ ಸಂಘದ ಅಧ್ಯಕ್ಷಾರ ರವಿ ಕಟ್ಟಿಮನಿಯವರು ಸೇವಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಬೆಂಗಳೂರಿನ ಜಾಗೃತಿ ಟ್ರಸ್ಟ್‌ ಅಧ್ಯಕ್ಷರಾದ ಬಿ. ನಾಗೇಶ ತಿಳಿಸಿದ್ದಾರೆ.

ಪ್ರತಿ ವರ್ಷ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವರನ್ನು ಗುರುತಿಸಿ ಪ್ರಶಸ್ತಿಗಳನ್ನು
ನೀಡಲಾಗುತ್ತಿದೆ. ಅದರಂತೆ ಸೆ. 26 ರಂದು ಜಾಗೃತಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯೋಗದಲ್ಲಿ ಅಕ್ಕಮಹಾದೇವಿ ಸಭಾಂಗಣ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು,ಪಂಪ ಮಹಾಕವಿ ವೇದಿಕೆ ಚಾಮರಾಜಪೇಟೆ ಬೆಂಗಳೂರಿನಲ್ಲಿ ನಡೆಯಲಿರುವ ನವದುರ್ಗಾ ವೈಭವ ಸಾಂಸ್ಕೃತಿಕ, ಕವಿಗೋಷ್ಠಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದವರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಈ ಕಾರ್ಯಕ್ರಮಕ್ಕೆ ಚಲನ ಚಿತ್ರ ನಟ,ನಟಿಯರು,ಸಾಹಿತಿಗಳು,
ಹಿರಿಯ ಪತ್ರಕರ್ತರು ಹಾಗೂ ಸ್ವಾಮಿಜಿಗಳು ಸೇರಿ ನಾಡಿನ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!