You are currently viewing LOCAL NEWS : ಕೊಪ್ಪಳದಲ್ಲಿ ನಡೆಯಲಿರುವ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬಂಜಾರ ಸಮುದಾಯದವರಿಂದ ಬಹಿಷ್ಕಾರ..! : ಅ. 6 ರಂದು ಸಿಎಂಗೆ ಘೇರಾವ್..!!

LOCAL NEWS : ಕೊಪ್ಪಳದಲ್ಲಿ ನಡೆಯಲಿರುವ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬಂಜಾರ ಸಮುದಾಯದವರಿಂದ ಬಹಿಷ್ಕಾರ..! : ಅ. 6 ರಂದು ಸಿಎಂಗೆ ಘೇರಾವ್..!!

ಪ್ರಜಾ ವೀಕ್ಷಣೆ ಸುದ್ದಿ : 

LOCAL NEWS : ಕೊಪ್ಪಳದಲ್ಲಿ ನಡೆಯಲಿರುವ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬಂಜಾರ ಸಮುದಾಯದವರಿಂದ ಬಹಿಷ್ಕಾರ..! : ಅ. 6 ರಂದು ಸಿಎಂಗೆ ಘೇರಾವ್..!!

ಕುಕನೂರು : ‘ಕೊಪ್ಪಳದಲ್ಲಿ ಇದೇ ಅಕ್ಟೋಬರ್‌ 6 ರಂದು ನಡೆಯಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸರಕಾರಿ ಕಾರ್ಯಕ್ರಮಕ್ಕೆ ಬಂಜಾರ ಸಮುದಾಯದ ಜನರು ಸಂಪೂರ್ಣವಾಗಿ ಬಹಿಷ್ಕಾರ ಹಾಕುತ್ತಿದ್ದು, ಅಂದೇ ಮುಖ್ಯಮಂತ್ರಿಗಳನ್ನು ಘೇರಾವ್ ಹಾಕುವುದರ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದೇವೆ’ ಎಂದು ಗೋರ ಸೇನಾ ಕರ್ನಾಟಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ತಿಳಿಸಿದರು.

ಇಂದು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಗೋರ ಸೇನಾ ಸಮಿತಿ ಹಾಗೂ ಬಂಜಾರ ಸಮುದಾಯದ ಸರ್ವ ನಾಗರಿಕರು ಪತ್ರಿಕಾಗೋಷ್ಠಿ ನಡೆಸಿದರು. ಈ ಬಗ್ಗೆ ಮಾತನಾಡಿದ ಸುರೇಶ್‌ ಬಳೂಟಗಿ, ‘ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ವಿಚಾರದಲ್ಲಿ ನಮ್ಮ ಸಮುದಾಯಗಳಿಗೆ ಭಾರಿ ಅನ್ಯಾಯವಾಗಿದ್ದು, ಹೀಗಾಗಿ ಕೊಪ್ಪಳದಲ್ಲಿ ನಡೆಯಲಿರುವ ಮುಖ್ಯಮಂತ್ರಿಗಳ ಸರಕಾರಿ ಕಾರ್ಯಕ್ರಮಕ್ಕೆ ಬಂಜಾರ ಸಮುದಾಯದ ಜನರು ಸಂಪೂರ್ಣವಾಗಿ ಬಹಿಷ್ಕಾರ ಹಾಕುತ್ತಿದ್ದು, ನಾವು ಯಾರೂ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸದೆ ಬಹಿಷ್ಕಾರ ಹಾಕುತ್ತಿದ್ದೇವೆ, ಅಲ್ಲದೆ ನಾವು ಇದೇ ಸಂಧರ್ಭದಲ್ಲಿ ಅವರನ್ನು ಘೇರಾವ ಹಾಕುವುದರ ಮೂಲಕ ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಲಿದ್ದೇವೆ ಎಂದರು.

‘ಇಷ್ಟು ದಿನ ನಾವು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೇವೆ, ಆದರೆ ಸರ್ಕಾರದಿಂದ ಯಾವುದೇ ಸ್ಪಂದನೆ ಇಲ್ಲ, ಇನ್ಮೇಲೆ ನಮ್ಮ ಹೋರಾಟದ ಸ್ವರೂಪ ಕಾಂತ್ರಿ ಹಾಗೂ ಉಗ್ರ ರೂಪದಲ್ಲಿ ಇರುತ್ತದೆ. ಇದರ ಜೊತೆಗೆ ಇದೇ ಅಕ್ಟೋಬರ್‌ 17 ರಂದು ಬಂಜಾರ ಸಮಾಜದ ನಾಯಕರಾದ ರವಿಕಾಂತ ಅಂಗಡಿ ನೇತೃತ್ವದಲ್ಲಿ ಗದಗದಲ್ಲಿ ನಡೆಯಲಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಮಾಜ ಬಾಂಧವರು ಭಾಗವಹಿಸಿ ಸರ್ಕಾರದ ಕಣ್ತೆರೆಸಬೇಕೆಂದು ಮನವಿ ಮಾಡಲಾಯಿತು.’ ಎಂದು ಸಮಾಜಕ್ಕೆ ಕರೆ ನೀಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡ ಹಂಪಣ್ಣ ಕಟ್ಟಿಮನಿ, ವಾಲಪ್ಪ ತಲ್ಲೂರು, ಯಮನೂರ ಭಾನಾಪೂರ, ಪ್ರಕಾಶ ಬಳಗೇರಿ, ಲಿಂಬಾನಾಯಕ, ರಾಘವೇಂದ್ರ ಬಳಗೇರಿ, ಚೇತನ ಬಳಗೇರಿ ಭಾಗವಹಿಸಿದ್ದರು.

Leave a Reply

error: Content is protected !!