You are currently viewing LOCAL NEWS : ಕುಕನೂರು ಪಟ್ಟಣದ ಸುತ್ತಮುತ್ತಲಿನಲ್ಲಿ ವಲಸೆ ಬಂದಿರುವ ಅಲೆಮಾರಿಗಳ ವಿವರ ಪಡೆದ ಸಮೀಕ್ಷೆ ತಂಡ..!

LOCAL NEWS : ಕುಕನೂರು ಪಟ್ಟಣದ ಸುತ್ತಮುತ್ತಲಿನಲ್ಲಿ ವಲಸೆ ಬಂದಿರುವ ಅಲೆಮಾರಿಗಳ ವಿವರ ಪಡೆದ ಸಮೀಕ್ಷೆ ತಂಡ..!

ಪ್ರಜಾ ವೀಕ್ಷಣೆ ಸುದ್ದಿ :

LOCAL NEWS : ಕುಕನೂರು ಪಟ್ಟಣದ ಸುತ್ತಮುತ್ತಲಿನಲ್ಲಿ ವಲಸೆ ಬಂದಿರುವ ಅಲೆಮಾರಿಗಳ ವಿವರ ಪಡೆದ ಸಮೀಕ್ಷೆ ತಂಡ..!


ಕುಕನೂರು : ಸರ್ಕಾರದ ಆದೇಶದಂತೆ ಯಾರೊಬ್ಬರನ್ನು ಸಹ ಬಿಡದೆ ಸಮೀಕ್ಷೆ ಮಾಡುವ ಗುರಿ ಹೊಂದಿರುವ ಸಮೀಕ್ಷಾ ತಂಡ ಅಲೆಮಾರಿಗಳನ್ನು ಸಹ ಭೇಟಿ ಮಾಡಿ ಅವರ ಸಂಪೂರ್ಣ ವಿವರ ಪಡೆದುಕೊಂಡು ಸಮೀಕ್ಷಾ ಕಾರ್ಯ ನಡೆಸಲಾಯಿತು.

ಕುಕುನೂರು ಪಟ್ಟಣದ ಹೊರವಲಯದಲ್ಲಿ ಬಿಡು ಬಿಟ್ಟಿರುವ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದ ಹೇಳವರ ಎರಡು ಕುಟುಂಬ ಹಾಗೂ ಧಾರವಾಡ ಜಿಲ್ಲೆ, ಕಲಘಟಗಿ ತಾಲೂಕಿನ ಡೊಂಬ್ರಿಕೊಪ್ಪ ಗ್ರಾಮದ ಹೆಳವರ 2 ಕುಟುಂಬಗಳು ಸೇರಿದಂತೆ ಒಟ್ಟು ನಾಲ್ಕು ಕುಟುಂಬಗಳ ಒಟ್ಟು 21 ಜನರ ಭೇಟಿ ಮಾಡಿ ಸಮೀಕ್ಷೆ ನಡೆಸಲಾಯಿತು.

ಈ ವೇಳೆಯಲ್ಲಿ ಕುಕನೂರಿನ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ನಬೀಸಾಬ್ ಕಂದಗಲ್ ವರದಿಗಾರರೊಂದಿಗೆ ಮಾತನಾಡುತ್ತಾ ಯಾರೊಬ್ಬರೂ ಸಹ ಸಮೀಕ್ಷೆಯಿಂದ ಹೊರಗೂಳಿಯಬಾರದು ಎಂಬ ಉದ್ದೇಶದಿಂದ ಸಮೀಕ್ಷೆ ತಂಡವು ಪಟ್ಟಣದಲ್ಲಿ ಬೀಡು ಬಿಟ್ಟಿರುವ ಹೆಳವರ ತಂಡವನ್ನು ಭೇಟಿ ಮಾಡಿ ಸಮೀಕ್ಷೆಗೆ ಸಂಬಂಧಪಟ್ಟಂತ ಅವರ ಮಾಹಿತಿಯನ್ನು ಪಡೆದು ಸಮೀಕ್ಷೆಗೆ ಅವರನ್ನು ಸೇರಿಸಲಾಯಿತು. ಈ ಕಾರ್ಯದಿಂದ ಸರ್ಕಾರಕ್ಕೆ ಸಂಪೂರ್ಣವಾದ ಮಾಹಿತಿ ನೀಡುವ ಪ್ರಾಮಾಣಿಕ ಪ್ರಯತ್ನ ನಮ್ಮ ತಂಡದಿಂದ ತಂಡದಿಂದ ನಡೆದಿದ್ದು ಇಲ್ಲಿಯ ತನಕ ಬಹುತೇಕ ಸಮೀಕ್ಷೆ ಕಾರ್ಯವು ಸಂಪೂರ್ಣಗೊಂಡಿದ್ದು ಇಂದು ಕೊನೆಯ ದಿನವಾದ್ದರಿಂದ ಅಳೆದುಳಿದ ಅಲ್ಪ ಪ್ರಮಾಣದ ಸಮೀಕ್ಷೆಯನ್ನು ಮಧ್ಯಾಹ್ನದ ಒಳಗೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು ಎಂದು ತಿಳಿಸಿದರು.

ಈ ವೇಳೆಯಲ್ಲಿ ಸಮೀಕ್ಷ ತಂಡದ ಪ್ರಮುಖರಾದ ಪೀರಸಾಬ್ ದಫೇದಾರ್, ಮಹೇಶ್ ಕುಮಾರ್, ಶಿವಪ್ಪ ಕರಿಯನ್ನವರ್, ಚಂದ್ರಶೇಖರ ದೊಡ್ಮನಿ, ಶರಣಪ್ಪ ಬೊಮ್ಮಳೆಕರ್, ಹಾಗೂ ಹೇಳವರ ಕುಟುಂಬದ ಪ್ರಮುಖರಾದ ಅರುಣ್ ಇಮ್ಮಡಿ ಹಾಗೂ ಭೀಮಪ್ಪ ಚಂದ್ರ ದಾತ ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!