ಮುದಗಲ್ಲ :-ಕಾಳಿಕಾದೇವಿ ಮೂತಿ೯ ಪ್ರತಿಷ್ಠಾಪನೆ: ಪೂರ್ಣ ಕುಂಭ ಮೆರವಣಿಗೆ…

ಮುದಗಲ್ಲ ವರದಿ..
ಕಾಳಿಕಾದೇವಿ ಮೂತಿ೯ ಪ್ರತಿಷ್ಠಾಪನೆ: ಪೂರ್ಣ ಕುಂಭ ಮೆರವಣಿಗೆ…

ಮುದಗಲ್ಲ :- ಪಟ್ಟಣದ ಕಿಲ್ಲಾದಲ್ಲಿರುವ ವಿಶ್ವಕರ್ಮ ಸಮಾಜದ ಆರಾಧ್ಯದೇವತೆ ಶ್ರೀ ಕಾಳಿಕಾದೇವಿ ಮೂರ್ತಿ ಪುನರ್ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ ನಿಮಿತ್ಯ ಶೀಲವಂತಮ್ಮ ದೇವಸ್ಥಾನ ಆರಂಭಗೊಂಡು  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಳಿಕಾದೇವಿ ದೇವಸ್ಥಾನಕ್ಕೆ ತಲುಪಿತು.

ದೇವಿಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ಗೋಪುರದ ಕಳಸ ಪ್ರತಿಷ್ಠಾಪನೆ ನಡೆಯಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮೆರವಣಿಗೆ, ಹೋಮ, ಜಲವಾಸ, ಪುಷ್ಪವಾಸ, ಶಯನವಾಸ, ಜೀವಕಳೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದದ ವ್ಯವಸ್ಥೆ ನಡೆಯಿತು
ಈ ಸಂದರ್ಭದಲ್ಲಿ ನಾಗಲಾಪೂರಕೃಷಿ ಪತ್ತಿನಸಹಕಾರಿ ಸಂಘದ ಅಧ್ಯಕ್ಷ ಶರಣಸವರಾಜ ಗೌಡ ,ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶ್ರೀಧರ ಪತ್ತಾರ,ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ ನೀಲಪ್ಪ ಕಂಬಾರ, ಸಮಾಜದ ಮುಖಂಡ ವಿರುಪಾಕ್ಷಪ್ಪ ಕನಸಾವಿ,  ವಿಶ್ವಕರ್ಮ ಸಮಾಜದ ತಾಲೂಕ ಪ್ರಧಾನ ಕಾರ್ಯದರ್ಶಿ ಕಾಂತಕುಮಾರ ಪತ್ತಾರ, ಸಂಪತ್ ಕುಮಾರ ಪತ್ತಾರ,ಡಾ!! ಕೃಷ್ಣ ಪತ್ತಾರ  ,ಮಲ್ಲಪ್ಪ ಮಾಟೂರ ,ಶಿವರಾಜ್ ತಳವಾರ ,ವರದಿಗಾರಾರದ  ರಾಘವೇಂದ್ರ ಗುಮಾಸ್ತೆ , ಚಂದ್ರಶೇಖರ್ ಗಂಗಾವತಿ ,ಸುರೇಶ್  ಪತ್ತಾರ , ಸಮಾಜ ಮುಖಂಡರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು..
 ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!