You are currently viewing LOCAL NEWS : ‘ಏಕ್ ಭಾರತ್, ಶ್ರೇಷ್ಠ ಭಾರತ್’ : ಬೇವೂರು ಪೊಲೀಸ್ ಠಾಣೆವತಿಯಿಂದ “ಏಕತಾ ನಡಿಗೆ” 

LOCAL NEWS : ‘ಏಕ್ ಭಾರತ್, ಶ್ರೇಷ್ಠ ಭಾರತ್’ : ಬೇವೂರು ಪೊಲೀಸ್ ಠಾಣೆವತಿಯಿಂದ “ಏಕತಾ ನಡಿಗೆ” 

ಪ್ರಜಾ ವೀಕ್ಷಣೆ ಸುದ್ದಿ :

LOCAL NEWS : ‘ಏಕ್ ಭಾರತ್, ಶ್ರೇಷ್ಠ ಭಾರತ್’ : ಬೇವೂರು ಪೊಲೀಸ್ ಠಾಣೆವತಿಯಿಂದ “ಏಕತಾ ನಡಿಗೆ” 

ಯಲಬುರ್ಗಾ : ‘ಭಾರತದ ಏಕತೆ ಮತ್ತು ಸಮಗ್ರತೆಯ ಮಹತ್ವವನ್ನು ಸಾರುವ ಮತ್ತು ‘ಏಕ್ ಭಾರತ್, ಶ್ರೇಷ್ಠ ಭಾರತ್’ ಎಂಬ ದೃಷ್ಟಿಕೋನವನ್ನು ಬಲಪಡಿಸಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಪಿಎಸ್ಐ ಎಸ್ ಪಿ ನಾಯ್ಕ್ ಅಭಿಪ್ರಾಯ ಪಟ್ಟರು.

ಇಂದು ಬೆಳ್ಳಂ ಬೆಳಗ್ಗೆ ರಾಷ್ಟ್ರೀಯ ಏಕತಾ ದಿನಾಚರಣೆಯ ಪ್ರಯುಕ್ತ “ರನ್ ಫಾರ್ ಯುನಿಟಿ” ಮ್ಯಾರಥಾನ್ ಓಟ ಹಾಗೂ “ಏಕತಾ ನಡಿಗೆ” ಕಾರ್ಯಕ್ರಮವನ್ನು ಬೇವೂರ್ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಯಲಬುರ್ಗಾ ಸಿಪಿಐ ಇವರ ಮಾರ್ಗದರ್ಶನದಲ್ಲಿ ಪಿಎಸ್ಐ ಎಸ್ ಪಿ ನಾಯ್ಕ್ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಸ್ ಪಿ ನಾಯ್ಕ್ ಅವರು, ‘ದೇಶದ ಮೊಟ್ಟ ಮೊದಲ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಗಳು ಅನನ್ಯ, ಭಾರತದ ಏಕತೆ ಮತ್ತು ಸಮಗ್ರತೆಯ ಮಹತ್ವವನ್ನು ಸಾರಿರುವುದರ ಜೊತೆಗೆ ವಿವಿಧತೆಯಲ್ಲಿ ಏಕತೆ ಎನ್ನುವ ಮೂಲ ಮಂತ್ರದೊಂದಿಗೆ ದೇಶವನ್ನು ಕಟ್ಟಿದ ಮಹಾನ್ ನಾಯಕ ಇವರು, ಇಂಥವರ ಜನ್ಮದಿನವನ್ನು “ರಾಷ್ಟ್ರೀಯ ಏಕತಾ ದಿನಾಚರಣೆ” ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

*’ರನ್ ಫಾರ್ ಯುನಿಟಿ’ ಮ್ಯಾರಥಾನ್ ಓಟ*

ತಾಲೂಕಿನ ಬೇವೂರು ಪೊಲೀಸ್ ಠಾಣೆಯ ಠಾಣಾಧಿಕಾರಿ ಎಸ್ಪಿ ನಾಯ್ಕ್ ನೇತೃತ್ವದಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ‘ರನ್ ಫಾರ್ ಯುನಿಟಿ’ 1 ಕಿಲೋ ಮೀಟರ್ ಮ್ಯಾರಥಾನ್ ಓಟ ಏರ್ಪಡಿಸಲಾಗಿತ್ತು. ಬೇವೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ 300 ಜನ ವಿದ್ಯಾರ್ಥಿಗಳು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ 300 ವಿದ್ಯಾರ್ಥಿಗಳಿಗೆ ‘Run For Unity’ ನಾಮ ಫಲಕ ಇರುವ ಟಿ-ಶರ್ಟ್ ವಿತರಿಸಲಾಯಿತು. ಈ “ಮ್ಯಾರಥಾನ್ ಓಟ”ದಲ್ಲಿ ಪ್ರಥಮ-1000ರೂ, ದ್ವಿತೀಯ-750ರೂ, ಹಾಗೂ ತೃತೀಯ- 500ರೂ., ಸ್ಥಾನಗಳನ್ನು ಪಡೆದವರಿಗೆ ಬಹುಮಾನ ನೀಡಲಾಯಿತು.

*ಏಕತಾ ನಡಿಗೆ ಮೆರವಣಿಗೆ*

ಬೇವೂರಿನ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆಯ ಪ್ರಯುಕ್ತ ಏಕತಾ ನಡಿಗೆ ಮೆರವಣಿಗೆ ಮಾಡಲಾಯಿತು.

ಇದೆ ವೇಳೆಯಲ್ಲಿ ಪಿಎಸ್ಐ ಎಸ್ ಪಿ ನಾಯ್ಕ್ ಅವರು “ನಮ್ಮ ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ನಾನು ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಮತ್ತು ಈ ಸಂದೇಶವನ್ನು ನನ್ನ ಸಹ ದೇಶವಾಸಿಗಳಲ್ಲಿ ಹರಡಲು ಶ್ರಮಿಸುತ್ತೇನೆ” ಎಂದು ಪ್ರತಿಜ್ಞೆ ಸ್ವೀಕರಿಸಿ, ವಿದ್ಯಾರ್ಥಿಗಳಿಗೆ ಬೋದಿಸಿದರು.

Leave a Reply

error: Content is protected !!