LOCAL EXPRESS :”ಕುಕನೂರ| ಕೆರೆ ಹೂಳು ಎತ್ತುವ ಕಾಮಗಾರಿ :ಅಕ್ರಮ ಮರಂ ಸಾಗಣೆ ವಿರುದ್ದ ಉಪಲೋಕಯುಕ್ತರಿಗೆ  ಸಾಮಾಜಿಕ ಹೋರಾಟಗಾರ ಎಸ್. ವಿ. ಸೋಮರೆಡ್ಡಿ ದೂರು”

You are currently viewing LOCAL EXPRESS :”ಕುಕನೂರ| ಕೆರೆ ಹೂಳು ಎತ್ತುವ ಕಾಮಗಾರಿ :ಅಕ್ರಮ ಮರಂ ಸಾಗಣೆ ವಿರುದ್ದ ಉಪಲೋಕಯುಕ್ತರಿಗೆ  ಸಾಮಾಜಿಕ ಹೋರಾಟಗಾರ ಎಸ್. ವಿ. ಸೋಮರೆಡ್ಡಿ ದೂರು”

“ಕುಕನೂರ| ಕೆರೆ ಹೂಳು ಎತ್ತುವ ಕಾಮಗಾರಿ :ಅಕ್ರಮ ಮರಂ ಸಾಗಣೆ ವಿರುದ್ದ ಉಪಲೋಕಯುಕ್ತರಿಗೆ  ಸಾಮಾಜಿಕ ಹೋರಾಟಗಾರ ಎಸ್. ವಿ. ಸೋಮರೆಡ್ಡಿ ದೂರು”

• • •

ಪ್ರಜಾ ವೀಕ್ಷಣೆ ಡೆಸ್ಕ್‌ ನ್ಯೂಸ್:‌

ಕುಕನೂರ : ತಾಲ್ಲೂಕಿನ ತಳಕಲ್ ಗ್ರಾಮದ ಬೆಣ್ಣೆಗೇರಿ ಸರ್ಕಾರಿ ಕೆರೆಯಲ್ಲಿ ಹೂಳು ಎತ್ತುವ ಕಾಮಗಾರಿ  ಭರದಿಂದ ನಡೆದಿದೆ ಎನ್ನಲಾಗಿದೆ.  ರಾಜಧನ ಕಟ್ಟದೇ ಈಗ ಅನಧಿಕೃತವಾಗಿ ತಮ್ಮಗೆ  ಬೇಕಾದವರ ನಿವೇಶನಕ್ಕೆ ಮರಂ ಸಾಗಿಸುತ್ತಿವುದನ್ನು ತಡೆಯಬೇಕೆಂದು  ಸಾಮಾಜಿಕ ಹೋರಾಟಗಾರ, ನಿವೃತ ಪ್ರಾಧ್ಯಾಪಕ ಎಸ್. ವಿ. ಸೋಮರೆಡ್ಡಿ ಅವರು ಆರೋಪಿಸಿದರು.  

ಅವರು ಭಾನುವಾರ ಪಟ್ಟಣದ ನೀರಿಕ್ಷಣಾ  ಮಂದಿರದಲ್ಲಿ ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೆ ಯುಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ವರ್ಗಾವಣೆ ಅಸ್ತ್ರ ಬಳಸಿ ಬೆದರಿಕೆ ಹಾಕಿದ್ದಾರೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮಗೆ ಬೇಕಾದ ರೀತಿಯಲ್ಲಿ ಅಕ್ರಮ ಕಾರ್ಯಗಳನ್ನು ಮಾಡಿಸಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಳ್ಳತ್ತಿದ್ದಾರೆ.  ಕಾನೂನು ಬಾಹಿರವಾಗಿ ಹೂಳೆತ್ತಿದ ಮರಂ ನ್ನು ಖಾಸಗಿ ವ್ಯಕ್ತಿಗಳ ನಿವೇಶನಗಳಲ್ಲಿ ಹಾಕುತ್ತಿದ್ದಾರೆ.ಇದು ಸರಿಯಾದ ಕ್ರಮವಲ್ಲ ಎಂದರು.

ಇತ್ತೀಚಿಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಪತ್ರ ಬರೆದ ಶಾಸಕ ರಾಯರಡ್ಡಿ ಅವರು,  ಬೆದರಿಕೆ ಮತ್ತು ಅನುಕೂಲ ಸಿಂದು ನಡೆಯಾಗಿದೆ. ಇದರಲ್ಲಿ ಆಧಿಕಾರಿಗಳನ್ನು ಬೆದರಿಸುವ ತಂತ್ರವಾಗಿದೆ ಅಷ್ಟೇ ಹೊರತು ಗಣಿ ಸಂಪತ್ತಿನ ಲೂಟಿ ತಡೆಯುವ ಉದ್ದೇಶವಿಲ್ಲ ಎಂದು ಟೀಕಿಸಿದರು.

ಈ ಸಂಬಂಧ ಆ.18, 2025ರಂದು ಕೊಪ್ಪಳ ಡಿ.ಸಿ ಅವರಿಗೆ ಮನವಿ ಸಲ್ಲಿಸಿದರೂ ಸಹ ಯಾವದೇ ಕ್ರಮ ಜರಗಿಸಿಲ್ಲ.ಹೀಗಾಗಿ   ಕರ್ನಾಟಕ ಉಪ ಲೋಕಾಯುಕ್ತರಿಗೆ ದೂರು ಸಹ ಸಲ್ಲಿಸಲಾಗಿದೆ . ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ  ಕೈಗೊಂಡು ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅವರು  ಆಗ್ರಹಿಸಿದ್ದರು.

ಅಕ್ರಮ ಮರುಂ ಸಾಗಣೆ ತಡೆಯಲು ಆದೇಶ ನೀಡಿತ್ತು.ಅಧಿಕಾರಿಗಳಿಗೆ  ಭಯ ಹುಟ್ಟಿಸಿ ಸದರಿ ಆದೇಶವನ್ನು ಹಿಂಪಡೆಯುವಂತೆ ಮಾಡಿ  ಶಾಸಕ ಬಸವರಾಜ ರಾಯರೆಡ್ಡಿ ಅವರು ತಮಗೆ ಅನುಕೂಲವಾಗುವ ರೀತಿಯಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಸರ್ಕಾರಕ್ಕೆ ಬರಬೇಕಾದ ರಾಜಧನ  ಕಟ್ಟದಂತೆ ಮರು ಆದೇಶ ಮಾಡಿಸಿಕೊಂಡಿದ್ದಾರೆ.ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಬರಬೇಕಾದ  ನೂರಾರು ಕೋಟಿ ಹಣ ನಷ್ಟವಾಗುತ್ತದೆ ಎಂದರು.

Leave a Reply

error: Content is protected !!