BREKING NEWS :”ಕುಕನೂರ| ಗುದ್ನೇಪ್ಪನ ಮಠದ ಜಮೀನು ವಿಚಾರ : 12 ಜನರ ವಿರುದ್ಧ ಸಮನ್ಸ್ ಜಾರಿ ಮಾಡಿದ ತಹಶೀಲ್ದಾರ್.!  

You are currently viewing BREKING NEWS :”ಕುಕನೂರ| ಗುದ್ನೇಪ್ಪನ ಮಠದ ಜಮೀನು ವಿಚಾರ : 12 ಜನರ ವಿರುದ್ಧ ಸಮನ್ಸ್ ಜಾರಿ ಮಾಡಿದ ತಹಶೀಲ್ದಾರ್.!  

ಕುಕನೂರ| ಗುದ್ನೇಪ್ಪನ ಮಠದ ಜಮೀನು ವಿಚಾರ : 12 ಜನರ ವಿರುದ್ಧ ಸಮನ್ಸ್ ಜಾರಿ ಮಾಡಿದ ತಹಶೀಲ್ದಾರ್.!  

• ಪ್ರಜಾ ವೀಕ್ಷಣೆ ಡೆಸ್ಕ್‌ ನ್ಯೂಸ್‌ : 

ಕುಕನೂರು : ಪಟ್ಟಣದ ಗುದ್ನೇಪ್ಪನ ಮಠದ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈಕೋರ್ಟ್ ನಲ್ಲಿ ಪ್ರಕರಣವು ವಿಚಾರಣಾ ಹಂತದಲ್ಲಿದ್ದು, ಆದಾಗ್ಯು ಸಹಿತ ಪರ ವಿರೋಧ ಮಾತುಗಳು ಬರುತ್ತಿದೆ. ಈ ಬಗ್ಗೆ ಗುದ್ನೇಪ್ಪನ ಮಠ ಹಾಗೂ ಸುತ್ತಮುತ್ತಲಿನ ಗ್ರಾಮದ 12 ಜನರ ವಿರುದ್ದ ಕುಕನೂರು ತಹಶೀಲ್ದಾರ್ ಹೆಚ್. ಪ್ರಾಣೇಶ್ ಅವರು ಸಮನ್ಸ್ ಜಾರಿಮಾಡಿರುತ್ತಾರೆ ಎಂದು ತಿಳಿದು ಬಂದಿದೆ.

ಇದೀಗ ಈ ವಿಚಾರದ ಕುರಿತು ಗುದ್ನೇಪ್ಪನ ಮಠ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಮೇಲೆ ಕುಕನೂರು ತಹಶೀಲ್ದಾರ್ ಹೆಚ್ ಪ್ರಾಣೇಶ್ ಸಮನ್ಸ್ ಜಾರಿಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಮನ್ಸ್ ನಲ್ಲೇನಿದೆ…..

ಗುದ್ದೆಪ್ಪನಮಠ ಗ್ರಾಮದ ಪ್ರತಿವಾದಿಗಳಿಗೆ ಪ್ರತ್ಯೇಕವಾಗಿ ಆದ ನೀವು ಗ್ರಾಮದಲ್ಲಿ ಶಾಂತಿಭಂಗವನ್ನುಂಟು ಮಾಡಿದ್ದು ಅಥವಾ ಮುಂದೆ ಶಾಂತಿಭಂಗವನ್ನುಂಟು ಮಾಡಬಹುದಾದ ಸಾಧ್ಯತೆ ಇರುವುದರಿಂದ ಕೃತ್ಯ ಎಸಗಬಹುದೆಂದು ನನಗೆ ಕಂಡು ಬಂದಿರುವುದರಿಂದ ನ. 6 ರಂದು ಬೆಳಿಗ್ಗೆ 11 – 30 ಗಂಟೆಗೆ ತಾಲೂಕಾ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಖುದ್ದಾಗಿ ಅಥವಾ ಪ್ರಾಧಿಕಾರ ಪಡೆದ ವಕೀಲರ ಮುಖಾಂತರ ಹಾಜರಾಗಿ ಒಂದು ವರ್ಷದ ಅವಧಿವರೆಗೆ ಶಾಂತಿ ಪಾಲನೆ ಮಾಡಬೇಕು. ಜೊತೆಗೆ 02 ಲಕ್ಷ ರೂಪಾಯಿಗಳ ಮುಚ್ಚಳಿಕೆಯನ್ನು ಬರೆದು ಕೊಡಲು ಮತ್ತು ರೂ 02 ಲಕ್ಷಗಳಿಗೆ ಮತ್ತೊಬ್ಬ ಜಾಮೀನುದಾರರ ಮುಚ್ಚಳಿಕೆಯನ್ನು ಬರೆದು ಕೊಡುವ ಮೂಲಕ ಭದ್ರತೆಯನ್ನು ಒದಗಿಸಲು ಸಹ ನಿಮ್ಮನ್ನು ಏಕೆ ಆಗತ್ಯಪಡಿಸಬಾರದೆಂಬುದಕ್ಕೆ ಕಾರಣ ತೋರಿಸಲು ಈ ಮೂಲಕ ನಿಮ್ಮನ್ನು ಅಗತ್ಯಪಡಿಸಲಾಗಿದೆ ಎಂದು ತಹಶೀಲ್ದಾರ್ ಹೆಚ್ ಪ್ರಾಣೇಶ್ ಸಮನ್ಸ್ ಜಾರಿ ಮಾಡಿರುವ ಪತ್ರದಲ್ಲಿದೆ ಎನ್ನಲಾಗಿದೆ.

ಗುದ್ನೇಪ್ಪನ ಮಠದ ಗ್ರಾಮಸ್ಥರಾದ ರುದ್ರಯ್ಯ ಗಲಬಿ, ಶಶಿಕುಮಾರ್ ಓಲಿ, ಪ್ರಕಾಶ್ ಧೂಪದ್, ಚನ್ನಬಸಯ್ಯ ಗಲಬಿ, ಹರಿಶಂಕರ ಬಂಡಿ ಗ್ರಾಮದ ಮಹೇಶ್ ಕಲ್ಮಠ, ಈರಯ್ಯ ಇನಾಮದಾರ್, ರುದ್ರಯ್ಯ ಸಿದ್ದಲಿಂಗಯ್ಯ ಬಂಡಿ, ವಿರುಪಾಕ್ಷಯ ಬಂಡಿ, ಶರಣಯ್ಯ ಹಳೆಮನಿ, ರೇವಣಸಿದ್ದಯ್ಯ ನಾಗಣ್ಣವರ್, ಈರಯ್ಯ ಬ್ಯಾಳಿ, ಚನ್ನಬಸಯ್ಯ ಓಲಿ ಇವರುಗಳ ಮೇಲೆ ಸಮನ್ಸ್ ನೀಡಲಾಗಿದೆ ಎಂದು ಹೇಳಲಾಗಿದೆ.

Leave a Reply

error: Content is protected !!