LOCAL NEWS : ಲೋಕಾರ್ಪಣೆಗೊಂಡ ಮಾಜಿ ಶಾಸಕ ಶಿರೂರು ವೀರಭದ್ರಪ್ಪ ಪ್ರತಿಮೆ : ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಹಾಲಿ-ಮಾಜಿ ಶಾಸಕರು..!
ಕುಕನೂರು : ತಾಲೂಕಿನ ಅಡೂರು ಗ್ರಾಮದಲ್ಲಿ ಹಿರಿಯ ಸ್ವತಂತ್ರ ಹೋರಾಟಗಾರ ಹಾಗೂ ಮಾಜಿ ಶಾಸಕ ದಿವಂಗತ ಶಿರೂರು ವೀರಭದ್ರಪ್ಪನವರ ಮೂರ್ತಿ ಪ್ರತಿಷ್ಠಾಪನ ಸಮಾರಂಭವನ್ನು ಉದ್ದೇಶಿಸಿ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ‘ಗ್ರಾಮದಲ್ಲಿ ಸರಕಾರದ ಯಾವುದೇ ತರಹದ ಸಹಕಾರ ಪಡೆಯದೆ ವೈಯಕ್ತಿಕ ಹಣದಿಂದ ಹಿರಿಯರಾದ ವೀರಭದ್ರಪ್ಪನವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ತಂಡದ ಕಾರ್ಯ ಶ್ಲಾಘನೀಯವಾಗಿದ್ದು ರೈತ ಕುಟುಂಬದ ವೀರಭದ್ರಪ್ಪನವರು ಗಾಂಧೀಜಿಯವರ ಆದರ್ಶಕ್ಕೆ ಮನಸ್ಸುತು ಸ್ವಾತಂತ್ರ್ಯ ಹೋರಾಟಕ್ಕೆ ದುಮಿಕಿ ಪ್ರಾಮಾಣಿಕತೆ ಹಾಗೂ ನಂಬಿಕೆಗೆ ಮಾದರಿಯಾಗಿದ್ದು ಅವರು ಬಿಟ್ಟು ಹೋಗಿರುವ ಮಾರ್ಗಗಳು ನಮಗೆ ಆದರ್ಶಗಳಾಗಿವೆ ಎಂದು ಹೇಳಿದರು.
ಜನರ ಸೇವೆಯೇ ಸಿಲ್ವಂತಿಕೆ ಎಂದು ನಂಬಿಕೊಂಡಿದ್ದ ಶಿರೂರು ವೀರಭದ್ರಪ್ಪನವರು ಲೋಕ ಸೇವಾ ಸಂಘದಿಂದ ರಾಜಕೀಯಕ್ಕ ಬಂದು ಶಾಸಕರಾಗಿ ಎಷ್ಟೋ ಹಳ್ಳಿಗಳ ಜನರ ಸಂಕಷ್ಟಕ್ಕೆ ಕಾಲ್ನಡಿಗೆಯಲ್ಲೇ ಹೋಗಿ ಪರಿಹಾರ ಗೊಳಿಸಿದ ಸಾಕಷ್ಟು ಉದಾಹರಣೆಗಳಿದ್ದು ಇಂದಿನ ರಾಜಕೀಯ ಸಂಪೂರ್ಣ ದಾರಿ ತಪ್ಪುತ್ತಿದ್ದು ಹಣ,ವಂಚನೆ, ಪರಸ್ಪರ ನಿಂದನೆಯ ಜೊತೆಗೆ ಭ್ರಷ್ಟಾಚಾರ ಆಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರತಿಯೊಬ್ಬರ ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ ದೊರೆಯುವುದು ನಿಶ್ಚಿತವಾಗಿದ್ದು ಅವರು ಸಮಾಜಕ್ಕೆ ತೋರಿದ ಪ್ರಾಮಾಣಿಕತೆಯೇ ಇಂದಿಗೂ ಸಹ ಜನತೆ ಅವರ ಮೇಲೆ ಗೌರವ 3:00 ಮಾಡಿದೆ ಸಮಾಜಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿತ್ತಿದ್ದ ವೀರಭದ್ರಪ್ಪನವರು ನಮಗೆಲ್ಲ ಮಾರ್ಗದರ್ಶಕರಾಗಿದ್ದು ಅಂತಹ ಮಹಾನ್ ವ್ಯಕ್ತಿಯ ಪ್ರತಿನಿಧಿ ಶೀಘ್ರದಲ್ಲಿ ಕುಕುನೂರ ಪಟ್ಟಣದಲ್ಲಿ ಪ್ರತಿಷ್ಠಾಪಿಸೋಣ ಎಂದು ಹೇಳಿದರು.
ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡುತ್ತಾ ಶಿರಡಿ ವೀರಭದ್ರಪ್ಪನವರು ತಮ್ಮ ಬದುಕಿನ ಜೀವಿತಾವಧಿಯಲ್ಲಿ ಉತ್ತಮ ಮೌಲ್ಯಗಳನ್ನು ಆದರಿಸಿಕೊಂಡ ಮಹಾನ್ ವ್ಯಕ್ತಿಯಾಗಿದ್ದು ಅವರ ಪ್ರೇರಣೆಯಿಂದಲೇ ನಾನು ಸಹ ಶಾಸಕ ಹಾಗೂ ಸಚಿವನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಚುನಾವಣೆ ಎದುರಿಸಿ ಜಯಗಳಿಸಿದ ಮೊದಲ ವ್ಯಕ್ತಿ ವೀರಭದ್ರಪ್ಪನವರಾಗಿದ್ದು ನ್ಯಾಯಾಲಯದ ಮೊರೆ ಹೋಗಿ 50 ದಿನ ಶಾಸಕರಾಗಿದ್ದು ಇತಿಹಾಸವಾಗಿದ್ದು ಇಂಥವರ ಪ್ರತಿಮೆಯನ್ನು ಗೋವಾ ರಾಜ್ಯದಲ್ಲಿ ಕೆಲಸ ಮಾಡುತ್ತ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಯುವಕರ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರು.
ವೇದಿಕೆಗೂ ಮುನ್ನ ಪ್ರಮುಖರಿಂದ ಶಿರೂರು ವೀರಭದ್ರಪ್ಪನವರ ಪ್ರತಿಮೆಯನ್ನು ಅನಾವರಣಗೊಳಿಸಿ ಅಂಬೇಡ್ಕರ್ ವೃತ್ತಕ್ಕೆ ಮಾಲಾರ್ಪಣೆ ಮಾಡಲಾಯಿತು.
ಈ ವೇಳೆಯಲ್ಲಿ ಯಲಬುರ್ಗಾ ಪಟ್ಟಣದ ಶ್ರೀಧರ ಮುರಳಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಗುಳೇದಗುಡ್ಡದ ಒಪ್ಪತ್ತೇಶ್ವರ ಶ್ರೀಗಳು, ಜಿಗೇರಿಯ ಶ್ರೀ ಗುರುಸಿದ್ಧ ಶಿವಾಚಾರ್ಯರು, ಹನುಮಂತರೆಡ್ಡಿ ಶಿರೂರ, ಬಿ ವಿ ಶಿರೂರ, ವೀರೇಶ್ ನಾಗುಜಿ, ಭೀಮರೆಡ್ಡಿಪ್ಪ ಹಾಳಕೇರಿ, ಬಸವರಾಜ ರಾಜೂರ, ಶಿವಕುಮಾರ್ ನಾಗಲಾಪುರಮಠ, ಶರಣಪ್ಪ ಹೊಸಮನಿ, ಭೀಮರೆಡ್ಡಿ ಹಾಳಕೇರಿ, ಮಲ್ಲನಗೌಡ ಕೋಣನಗೌಡ, ವೀರಣ್ಣ ಹುಬ್ಬಳ್ಳಿ, ಕೇರಿಬಸಪ್ಪ ನಿಡಗುಂದಿ, ಕೆ ಬಿ ಬ್ಯಾಳಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.