ಮುದಗಲ್ಲ :- ಕನಾ೯ಟಕ ರಕ್ಷಣೆ ವೇದಿಕೆಯ ಸ್ವಾಭಿಮಾನಿ ಸೇನೆ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ  ಆಚರಣೆ..

ಮುದಗಲ್ಲ ವರದಿ…

70ನೇ ಕನ್ನಡ ರಾಜ್ಯೋತ್ಸವ ಕನಾ೯ಟಕ ರಕ್ಷಣೆ ವೇದಿಕೆಯ ಸ್ವಾಭಿಮಾನಿ ಸೇನೆ ವತಿಯಿಂದ ಆಚರಣೆ..

ಮುದಗಲ್ಲ :- ರಂಗ ಮಂದಿರದ ಹತ್ತಿರ ಇರುವ ಕನ್ನಡದ ಧ್ವಜಾ ಕಟ್ಟೆಯಲ್ಲಿ ಮುದಗಲ್ಲ ಪೋಲಿಸ್ ಠಾಣೆಯ ASI ಚನ್ನಬಸವ ಅವರು ಧ್ವಜಾರೋಹಣ ನೆರವೇರಿದರು.

ಈ ಸಂದರ್ಭದಲ್ಲಿ  ಕನಾ೯ಟಕ ರಕ್ಷಣೆ ವೇದಿಕೆಯ ಸ್ವಾಭಿಮಾನಿ ಸೇನೆ ಕಾರ್ಯದರ್ಶಿಯಾದ  ಎಸ್ ಎನ್ ಖಾದ್ರಿ, ಅವರು ಮಾತನಾಡಿದರು ನಮ್ಮ ಕನ್ನಡ ನಾಡು ಶ್ರೇಷ್ಠ ಸಂಸ್ಕøತಿ ಮತ್ತು ಪರಂಪರೆಯನ್ನು ಹೊಂದಿದೆ. ಈ ನಾಡನ್ನು ಮತ್ತು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಎಲ್ಲರೂ ಕನ್ನಡವನ್ನು ಹೆಚ್ಚೆಚ್ಚು ಬಳಕೆ ಮಾಡಿ ಅದರ ಅಸ್ತಿತ್ವವನ್ನು ಕಾಪಾಡಬೇಕಾಗಿದೆ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮುದಗಲ್ಲ ಪೋಲಿಸ್ ಠಾಣೆಯ ASI ಚನ್ನಬಸವ ಹಿರಿಯರು ಪತ್ರಕರ್ತ ರಾದ ರಾಘವೇಂದ್ರ ಗುಮಾಸ್ತೆ, ಶರಣಯ್ಯ ಒಡೆಯರ್, ಹನುಮಂತ ನಾಯಕ್, ಹಾಗೂ ಮೈಬುಸಾಬ ಕಡ್ಡಿಪುಡಿ, ಪುರಸಭೆಯ ಮ್ಯಾನೇಜರ್ ಸುರೇಶ್ , ಜಿಲಾನಿ ಪಾಶ, ಅವರಿಗೆ ಸನ್ಮಾನಿಸಲಾಯಿತು
 ಈ ಸಂದರ್ಭದಲ್ಲಿ ಆಟೋ ಚಾಲಕರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ  ಸಾಬು ಹುಸೇನ್, ಇಸ್ಮಾಯಿಲ್ ಬಳಿಗಾರ , ಮಹಾಂತೇಶ ಚಟ್ಟರ್ , ಇಮಾಮ ಹುಸೇನ್ ತಮಾಟಾ, ಶಶಿಧರ ಸ್ವಾಮಿ, ಬಾಲಪ್ಪ, ಜಮಾಲಿಸಾಬ, ರಾಯಪ್ಪ, ಹನೀಪ್ ಖಾನ್ , ಭಿಮಣ್ಣ, ಅಬ್ದುಲ್ ಮಜೀದ್, ಜಮೀರ್ ಮೇಸ್ತ್ರಿ, ಅವೇಜ್ ಮುನ್ನ,ಮಹಾಂತೇಶ ಚಲವಾದಿ ,ಬಸವರಾಜ ಬಂಕದಮನೆ, ಇದ್ದರು.
ವರದಿ:- ಮಂಜುನಾಥ ಕುಂಬಾರ..

Leave a Reply

error: Content is protected !!