ವಿಸ್ತಾರ ಸಂಸ್ಥೆಯ ಸಂಯೋಜಕಿ ಜಯಶ್ರೀ ಮಾತನಾಡಿ, ’18 ವರ್ಷದೊಳಗಿನ ಪ್ರತಿಯೊಬ್ಬ ಮಗುವಿಗೂ ಈ ಕಾಯಿದೆ ಅನ್ವಯಿಸುತ್ತದೆ, ಹೆಣ್ಣುಮಕ್ಕಳಿಗೆ ಕೆಟ್ಟ ಸ್ಪರ್ಶ, ಉತ್ತಮ ಸ್ಪರ್ಶ ಇವುಗಳ ಬಗ್ಗೆ ಜಾಗ್ರತೆ ಇರಬೇಕು ಎಂದು ಮಕ್ಕಳಿಗೆ ತಿಳಿ ಹೇಳಿದರು.
ಸಂಯೋಜಕ ಹಾಗೂ ತರಬೇತುದಾರ ಅಲಿಸಾಬ ಮಾತನಾಡಿ, ‘ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ತಿಂಡಿ-ನಿಸು ಹಾಗೂ ಬಹುಮಾನಗಳ ಆಮಿಷ ತೋರಿಸಿ ಕೆಲವರು ಸಲುಗೆಯಿಂದ ನಡೆದುಕೊಳ್ಳುತ್ತಾರೆ. ಮಕ್ಕಳಿಗೆ ಇದರ ಬಗ್ಗೆ ಅರಿವು ಇರುವುದಿಲ್ಲ. ಹಾಗಾಗಿ ಮಕ್ಕಳು ಯಾರಾದರೂ ತಿನಿಸು ಕೊಟ್ಟರೆ ತಿನ್ನಬಾರದು. ಮಕ್ಕಳ ಅನುಮತಿ ಇಲ್ಲದೇ ದೇಹದ ಯಾವುದೇ ಭಾಗವನ್ನು ಸಹ ಮುಟ್ಟುವಂತಿಲ್ಲ. ಒಂದು ವೇಳೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದ ಪಕ್ಷದಲ್ಲಿ ಜಿಲ್ಲಾ ಮಕ್ಕಳ ರಕ್ಷ ಣಾ ಘಟಕ್ಕೆ ತಿಳಿಸಿದರೆ, ಅಂತವರ ವಿರುದ್ಧ ಕ್ರಮಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಕಾಲೇಜು ಮಕ್ಕಳ ಹಾಗೂ ಉಪನ್ಯಾಸಕರ ಜೊತೆ ಬಹಳಷ್ಟು ಪ್ರಶ್ನೋತ್ತರಗಳು ನಡೆದು, ಸಂವಾದ ಮಾಡಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ವಿಸ್ತಾರ ಸಂಸ್ಥೆಯ ಕನಸು ಕಿಶೋರಿ ಸಂಘಟನೆಯ ಮಂಜುಳಾ, ಅಶ್ವಿನಿ ಅವರು ಭಾಗವಹಿಸಿದ್ದರು.