You are currently viewing LOCAL NEWS : ಕುಕನೂರು | ತೋಳ ದಾಳಿ : 12 ಕುರಿಗಳು ಸಾವು : ಕುರಿಗಾಯಿ ಬದುಕು ಅತಂತ್ರ..!!

LOCAL NEWS : ಕುಕನೂರು | ತೋಳ ದಾಳಿ : 12 ಕುರಿಗಳು ಸಾವು : ಕುರಿಗಾಯಿ ಬದುಕು ಅತಂತ್ರ..!!

LOCAL NEWS : ಕುಕನೂರು | ತೋಳ ದಾಳಿ : 12 ಕುರಿಗಳು ಸಾವು : ಕುರಿಗಾಯಿ ಬದುಕು ಅತಂತ್ರ..!!

ಪ್ರಜಾವೀಕ್ಷಣೆ ಸುದ್ದಿ:

ಕುಕನೂರು: ತಾಲೂಕಿನ ಮಂಗಳೂರು ಗ್ರಾಮದ ಹೊರವಲಯದಲ್ಲಿ ಮೇಯಿತಿದ್ದ ಕುರಿಗಳ ಹಿಂಡಿನ ಮೇಲೆ ಗುರುವಾರ ಸಂಜೆ 6 ಗಂಟೆಗೆ (ಡಿ. 25) ತೋಳ ದಾಳಿ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ 12 ಕುರಿಗಳು ಸಾವನ್ನಪ್ಪಿದೆ ಎಂದು ಮಾಹಿತಿ ಇದೆ.

ಮಂಗಳೂರು ಗ್ರಾಮದ ಕುರಿಗಾಯಿ ಯಮನೂರಪ್ಪ ನಾಗಪ್ಪ ಕಟಗಿ ಎಂಬುವರ ಕುರಿಗಳು ಎಂದು ತಿಳಿದು ಬಂದಿದೆ. ಮಂಗಳೂರು ಸೀಮೆಯಲ್ಲಿ ಕುರಿಗಳ ಹಿಂಡು ಬಿಟ್ಟ ಸಮಯದಲ್ಲಿ ತೋಳವು ದಾಳಿ ನಡೆಸಿದ್ದು, ಒಂದು ಲಕ್ಷ ಕ್ಕೂ ಅಧಿಕ ರೂಪಾಯಿ ಮೌಲ್ಯದ ಕುರಿಗಳನ್ನು ತಿಂದು ಹಾಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗ್ರಾಮದ ಪಶು ವೈದ್ಯಾಧಿಕಾರಿ ಬಾಪುಗೌಡ ಪಾಟೀಲ ಮತ್ತು ಡಾ. ಸುಷ್ಮಾ ಹಾಗೂ ಅರಣ್ಯ ಇಲಾಖೆ ಅಧಿಕಾರಿ ಸಂತೋಷ ಸ್ಥಳಕ್ಕೆ ಭೇಟಿ ನೀಡಿ ಈ ಘಟನೆ ಕುರಿತು ಮಾಹಿತಿ ತಗೆದುಕೊಂಡು, ಪರಿಶೀಲನೆ ನಡೆಸಿದ್ದಾರೆ.

ಕುರಿಗಳಿಂದಲೇ ನಮ್ಮ ಜೀವನ ಸಾಗುತ್ತಿತ್ತು. ಈ ಘಟನೆಯಿಂದ ಪರಿಸ್ಥಿತಿ ಚಿಂತಾಜನಕವಾಗಿದೆ. ದಯವಿಟ್ಟು ಸರಕಾರ ಪರಿಹಾರ ನೀಡಿ,”

ಯಮನೂರಪ್ಪ ನಾಗಪ್ಪ ಕಟಗಿ, ಮಂಗಳೂರು ಗ್ರಾಮ

 

ಈ ಘಟನೆಯಿಂದ ಯಮನೂರಪ್ಪ ಮತ್ತು ಕುಟುಂಬದ ಮೇಲೆ ಭಾರೀ ಆರ್ಥಿಕ ಹೊರೆಯ ಒತ್ತಡ ಉಂಟುಮಾಡಿದ್ದು, ಅವರು ಸರ್ಕಾರದಿಂದ ತಕ್ಷಣ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!