ಮುದಗಲ್ಲ ವರದಿ..
ಮಾತುಕೊಟ್ಟಿದ್ದಕ್ಕಾಗಿ ಕೈಯ್ಯನ್ನೇ ಕತ್ತರಿಸಿಕೊಂಡ ಅಮರ ಶಿಲ್ಪಿ ಜಕಣಾಚಾರಿ !

ಮುದಗಲ್ಲ :- ಅಮರ ಶಿಲ್ಪಿ ಜಕಣಾಚಾರಿ ಅವರ ಕೈಯ್ಯಲ್ಲಿ ಅರಳಿದ ಜಗತ್ತಿನ ಅದ್ಭುತ ಶಿಲ್ಪಗಳಾದ ಬೆಲೂರು ಮತ್ತು ಹಳೆಬೀಡು ಸೇರಿದಂತೆ ಇತರ ಸ್ಥಳಗಳಲ್ಲಿನ ಕಲಾಕೃತಿಗಳನ್ನು ನೋಡುವುದೇ ಒಂದು ಸೌಭಾಗ್ಯ ಎಂದು ಅವರು ತಿಳಿಸಿದರು.
ಗುರುವಾರ(ಜ.1) ಮುದಗಲ್ಲ ಪುರಸಭೆ ವತಿಯಿಂದ ನಡೆದ ಅಮರ ಶಿಲ್ಪಿ ಜಕಣಚಾರಿ ಜಯಂತಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಸಮಾಜದ ಹಿರಿಯ ರಾದ ಕಾಳಪ್ಪ ಅವರು ಅಮರ ಶಿಲ್ಪಿ ಜಕಣಚಾರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದರು ನಂತರ ಮಾತನಾಡಿದ ಡಾ!! ಕೃಷ್ಣಪ್ಪ ಪತ್ತಾರ ಅವರು ಅವರು ಮಾತನಾಡಿದರು ಅಮರಶಿಲ್ಪಿ ಜಕಣಾಚಾರಿ ಅವರು ಅತ್ಯಂತ ಶ್ರೇಷ್ಠವಾದ ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿಯಾಗಿದ್ದಾರೆ. ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ ಎಂದು ತಿಳಿಸಿದರು.
ಬೇಲೂರಿನಲ್ಲಿ ಅವನು ಶಿಲ್ಪಿಯ ಕೆಲಸಕ್ಕಾಗಿ ನೇಮಿಸಲ್ಪಟ್ಟು, ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಒಂದು ಶಿಲ್ಪದಲ್ಲಿ ಒಂದು ಲೋಪವನ್ನು ತೋರಿಸಿಕೊಟ್ಟನು.
ಇದರಿಂದ ಕೋಪಗೊಂಡ ಜಕಣಾಚಾರಿಗಳು ಅವರು ಕೆತ್ತಿದ ಶಿಲ್ಪದಲ್ಲಿ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳು ವುದಾಗಿ ಪ್ರಮಾಣ ಮಾಡಿದರು.
ಬಳಿಕ ಆ ಶಿಲ್ಪವನ್ನು ಪರೀಕ್ಷಿಸಿದ ನಂತರ, ದೋಷವಿರುವುದು ನಿಜವೆಂದು ಗೊತ್ತಾಗಿ ಜಕಣಾಚಾರಿ ತಮ್ಮ ವಾಗ್ದಾನದಂತೆ ತಮ್ಮ ಬಲಗೈಯನ್ನು ಕತ್ತರಿಸಿಕೊಂಡರು.
ಕೊನೆಯಲ್ಲಿ, ಆ ಇಬ್ಬರು ಶಿಲ್ಪಿಗಳು ಅವರಿಬ್ಬರೂ ತಂದೆ, ಮಗ ಎಂಬ ಸಂಬಂಧವನ್ನು ತಿಳಿದುಕೊಂಡರು ಎಂದು ಅಮರ ಶಿಲ್ಪಿ ಜಕಣಾಚಾರಿ ಅವರ ಜೀವನ ಚರಿತ್ರೆಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಯ ಮ್ಯಾನೇಜರ್ ಸುರೇಶ , ಸಿಬ್ಬಂದಿ ಕಂದಾಯ ವಿಭಾಗದ ರೇಣುಕಾ , ಸಿಬ್ಬಂದಿ ಚನ್ನಮ್ಮ ದಳವಾಯಿ ಹಿರೇಮಠ, ನಿಸಾರ್ , ಸಂಪತ್ತು , ಬಾಬ ,ಹಾಗೂ ಪತ್ತಾರ ಸಮಾಜದ ಉದಯ್ ಕಂಬಾರ , ಕಾಳಪ್ಪ , ಮಾನಪ್ಪ ಪತ್ತಾರ ,ನಾರಾಯಣಪ್ಪ ,ಡಾ!! ಕೃಷ್ಣ ಪತ್ತಾರ,ಶೀ ಶೈಲಪ್ಪ, ಚಿನ್ನಪ್ಪ, ಅಮರರೇಶ ಪತ್ತಾರ ಕಿಲ್ಲಾ, ನಿಲಪ್ಪ ಕಂಬಾರ, ಪಂಪಾಪತಿ,ಅಮರೇಶ ಕನ್ನಾಳ,ಪ್ರಾಣೇಶ ಪತ್ತಾರ ಪೆಟ್ರೋಲ್ ಬಂಕ್ ಇತರರು ಉಪಸ್ಥಿತರಿದ್ದರು
ವರದಿ:- ಮಂಜುನಾಥ ಕುಂಬಾರ