
ಮುದಗಲ್ಲ :-ಸ್ಥಳೀಯ ಎಸ್.ವಿ.ಎಂ ಕನ್ನಡ & ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಸಂಕ್ರಾಂತಿ ಸುಗ್ಗಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಮೀಣ ಸೊಗಡಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪು ಧರಿಸಿ ಗಮನ ಸೆಳೆದರು.

ಶಾಲಾ ಆವರಣವನ್ನು ರಂಗೋಲಿ, ಬಾಳೆಕಂದು, ಮಾವಿನ ತೋರಣ, ಕಬ್ಬಿನ ಜಲ್ಲೆ, ತೆಂಗಿನ ಗರಿಗಳಿಂದ ಅಲಂಕರಿಸಲಾಗಿತ್ತು. ಗೋ ಪೂಜೆ, ರಾಶಿ ಪೂಜೆ, ಆಹಾರ ತಯಾರಿಕೆ, ಗಾಳಿಪಟ ಹಾರಿಸುವಿಕೆಯಂತಹ ಪರಂಪರಾಗತ ಆಚರಣೆಗಳು ನಡೆದವು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಆಡಳಿತಧಿಕಾರಿಯಾದ ಆನಂದ ಸರಗಣಾಚಾರಿ ಅವರು ಸಂಕ್ರಾಂತಿ ಹಬ್ಬವನ್ನು ಶತಮಾನ ಗಳಿಗಿಂತ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಚಳಿಗಾಲದಲ್ಲಿ ರಾಸುಗಳಿಗೆ ಬೆಚ್ಚನೆಯ ವಾತಾವರಣ ಸೃಷ್ಟಿಸಲು ಕಿಚ್ಚು ಹಾಯಿಸುವುದು ವಾಡಿಕೆ. ಸುಗ್ಗಿ ಕಾಲ ಮುಗಿದು ಬೆಳೆಗಳು ರೈತರ ಕೈ ಸೇರಿದ ಖಷಿಯಲ್ಲಿ ಎಲ್ಲರೂ ಸಾಮೂಹಿಕವಾಗಿ ತಮ್ಮ ತಮ್ಮ ಹೊಲ, ಗದ್ದೆಗಳಲ್ಲಿ ನವ ಧಾನ್ಯಗಳನ್ನು ರಾಶಿ ಹಾಕಿ ಪೂಜೆ ಮಾಡುತ್ತಿದ್ದು, ಇದನ್ನು ಯುವ ಪೀಳಿಗೆಗೆ ಪರಿಚಯಿಸಿ ಮುಂದುವರೆಸಿಕೊಂಡು ಹೋಗುವಂತೆ ಪ್ರೇರೇಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ಸಂಕ್ರಾಂತಿ ಎಂದರೆ ಹೆಣ್ಣು ಮಕ್ಕಳಿಗೆ ವಿಶೇಷವಾದ ಹಬ್ಬ. ಈ ಹಬ್ಬದಲ್ಲಿ ಎಳ್ಳು, ಬೆಲ್ಲ, ಕಡಲೆಕಾಯಿ ಬೀಜ, ಹುರಿಗಡಲೆ ಎಲ್ಲವೂ ಮಿಶ್ರಣ ಮಾಡಿದ ಸಿಹಿಯನ್ನು ಹಂಚಿ ಬಂಧುಗಳಿಂದ ಹರಸಿಕೊಳ್ಳುವುದು ವಾಡಿಕೆ. ಅದಕ್ಕೂ ಮುಂಚೆ ಹಿರಿಯರು ತ್ವಚೆಯ ಆರೋಗ್ಯದ ದೃಷ್ಟಿಯಿಂದ ಮನೆಯಲ್ಲಿ ಎಳ್ಳು-ಬೆಲ್ಲ ಸವಿಯುತ್ತಿದ್ದರು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಚಂದ್ರಶೇಖರ ನಾಯಕ್ , ಮಾಬುಸಾಬು, ಸಂಜೀವ್ ಬಾಕಲಿ,ಶ್ವೇತ, ಅನೀಶ್ ಪಾತೀಮಾ, ಬಸವರಾಜ ಶರಣಬಸವ, ರಾಘವೇಂದ್ರ, ವಿಕಾಸ್, ಶಾಂಭವಿ, ಸಂಜನಾ, ಪವಿತ್ರ, ನಂದಿನಿ ಕುಂಬಾರ, ಸೌಜನ್ಯಾ, ಪರೀಯಾ ಪಾತೀಮಾ, ಇತರರು.
ವರದಿ:- ಮಂಜುನಾಥ ಕುಂಬಾರ