ಮುದಗಲ್ಲ :- ರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ : ಎಸ್.ವಿ.ಎಂ ಶಾಲೆಯ ರಾಘವೇಂದ್ರ ಅಬಾಕಸ್ & ವೇದಿಕ್ ಮ್ಯಾಥಮ್ಯಾಟಿಕ್ಸ್ ಸೆಂಟರ್ ಸಾಧನೆ..

ಮುದಗಲ್ಲ :- ಗೋವಾದಲ್ಲಿ ಕಳೆದ ವಾರ ನಡೆದ ರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥ್‌ಮೆಟಿಕ್ ಸ್ಪರ್ಧೆಯಲ್ಲಿ ಪಟ್ಟಣದ ಎಸ್.ವಿ.ಎಂ ಶಾಲೆಯ ರಾಘವೇಂದ್ರ ಅಬಾಕಸ್ & ವೇದಿಕ್ ಮ್ಯಾಥಮ್ಯಾಟಿಕ್ಸ್ ಸೆಂಟರ್ ಕೇಂದ್ರದ ಸೂಪರ್ ಚಾಂಪಿಯನ್ 7 ವಿದ್ಯಾರ್ಥಿಗಳಾ ತೇಜಸ್ವಿನಿ , ಶ್ರೀ ಕರ್ , ಸೂಪಿಯಾನ, ಪೈಜಾನ್ , ರಿಧಾನಾಜ್ ,ಅಶ್ವನ್ , ಮಹಾಲಕ್ಷ್ಮಿ , ಹಾಗೂ ಚಾಂಪಿಯಸ್ಸ್ ಆಗಿ ಐದು ವಿಧ್ಯಾರ್ಥಿ ಗಳು ಚಾಣಕ್ಯ ,ಸಾತ್ವಿಕ್ ,ಯುಗಾಂತ್ ,ಅಬ್ದುಲ್ ಜೈನ್ ಹಾಗೂ ರನ್ನರ್ ಆಪ್ ಬಹುಮಾನ ದಲ್ಲಿ 3 ವಿಧ್ಯಾರ್ಥಿ ಗಳು ಭವನ್ , ಹೀತೇಶ, ಶಂಭವಿ, ಹಾಗೂ ವೇದಿಕೆ ಗಣಿತದಲ್ಲಿ ಅಭಯ ,ಮೊಹಮ್ಮದ್ ರಮಾನ್ , A.B ಸಿಂಚನಾ, ಇಶರತ್ ಪಾತೀಮಾ , ವಿಧ್ಯಾರ್ಥಿ ವಿವಿಧ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಎಸ್.ವಿ.ಎಂ ಶಾಲೆಯ ರಾಘವೇಂದ್ರ ಅಬಾಕಸ್ & ವೇದಿಕ್ ಮ್ಯಾಥಮ್ಯಾಟಿಕ್ಸ್ ಸೆಂಟರ್ ಸಂಸ್ಥೆಯ ಕಾರ್ಯದರ್ಶಿ ಸಂಗಮೇಶ ಸರಗಣಾಚಾರಿ ರವಿವಾರ ಪತ್ರಿಕಾ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು ಮಾತನಾಡಿ, `ರಾಘವೇಂದ್ರ ಅಬಾಕಸ್ & ವೇದಿಕ್ ಮ್ಯಾಥಮ್ಯಾಟಿಕ್ಸ್ ಸೆಂಟರ್ ಮುದಗಲ್ಲ ನೀಡಲಾಗುವ ಗುಣಮಟ್ಟದ ತರಬೇತಿ ಹಾಗೂ ಮಕ್ಕಳ ನಿರಂತರ ಪರಿಶ್ರಮಕ್ಕೆ ಸಂದ ಜಯವಿದು’ ಎಂದು ತಿಳಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಅಲ್ಲದೆ, ಮಕ್ಕಳ ಯಶಸ್ಸಿಗೆ ಬೆನ್ನೆಲುಬಾಗಿ ನಿಂತ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕಿಯಾದ ಸಹರಬಾನು, ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ.