You are currently viewing FLASH NEWS : ರಾಷ್ಟ್ರಮಟ್ಟದ ನಾಲ್ವಡಿ ಕೃಷ್ಣರಾಜಒಡೆಯರ್ ಪ್ರಶಸ್ತಿಗೆ ಭಾಜನರಾದ ಸೋಮನಾಥ ದೋಟಿಹಾಳ

FLASH NEWS : ರಾಷ್ಟ್ರಮಟ್ಟದ ನಾಲ್ವಡಿ ಕೃಷ್ಣರಾಜಒಡೆಯರ್ ಪ್ರಶಸ್ತಿಗೆ ಭಾಜನರಾದ ಸೋಮನಾಥ ದೋಟಿಹಾಳ

FLASH NEWS : ರಾಷ್ಟ್ರಮಟ್ಟದ ನಾಲ್ವಡಿ ಕೃಷ್ಣರಾಜಒಡೆಯರ್ ಪ್ರಶಸ್ತಿಗೆ ಭಾಜನರಾದ ಸೋಮನಾಥ ದೋಟಿಹಾಳ


ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ :  

ಕೊಪ್ಪಳ ಫೆ.23 : ನಾಡಿನ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಜಾನಪದ ಕಲಾವಿದರ ಒಕ್ಕೂಟ (ರಿ), ಮೈಸೂರು ವಿಭಾಗ ಇವರು ಕೊಡಲ್ಪಟ್ಟ 2025-26ನೇ ಸಾಲಿನ ರಾಜ್ಯ ಮಟ್ಟದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಬರಹಗಾರ, ಸಾಹಿತಿ ಸೋಮನಾಥ ಸೋಮನಾಥ ಅವರಿಗೆ ನೀಡಿ ಗೌರವಿಸಲಾಯಿತು.

ಸುಮಾರು 20 ವರ್ಷಗಳಿಂದ ಯಾವುದೇ ಪ್ರಚಾರ ಬಯಸದೇ ಸಾಹಿತ್ಯಕ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ದೋಟಿಹಾಳ ಸೋಮನಾಥ ಅವರು ಒಂದು ಕವಿತಾ ಸಂಕಲನ, ಸಂಪಾದನ ಕೃತಿ ಸೇರಿ, ಹಲವಾರು ಮೌಲಿಕ ಬರೆಹಗಳು ನಾಡಿನ ದಿನಪತ್ರಿಗಳಲ್ಲಿ ಪ್ರಕಟಿತಗೊಂಡಿವೆ. ಹಾಗೂ ಹೋಬಳಿ, ಜಿಲ್ಲೆ, ವಿಭಾಗ, ರಾಜ್ಯಮಟ್ಟದ ಕವಿಗೋಷ್ಠಿ, ಸಾಹಿತ್ಯಕ ಸಮೇಳನ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕನ್ನಡ ಸಾಹಿತ್ಯಕ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಸೋಮನಾಥರನ್ನು ಜಾನಪದ ಕಲಾವಿದರ ಒಕ್ಕೂಟ (ರಿ), ಮೈಸೂರು ಸಂಸ್ಥೆಯು ಸಾಹಿತ್ಯ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ಮೈಸೂರ ನಗರದ ಕೃಷ್ಣಮೂರ್ತಿಪುರಂ ನಲ್ಲಿರುವ ನಮನ ಕಲಾ ಮಂಟಪದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಕೃಷ್ಣ, ಕವಿ ಜಯಪ್ಪ ಹೊನ್ನಾಳಿ, ಲೇಖಕ ಸತೀಶ್ ಜವರೇಗೌಡ, ಮೈಸೂರಿನ ಜಾನಪದ ಒಕ್ಕೂಟ (ರಿ) ಅಧ್ಯಕ್ಷ ಆರ್. ಕೆ.ಸ್ವಾಮಿ ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾಹಿತಿ ದೋಟಿಹಾಳ ಸೋಮನಾಥ ಅವರು ರಾಜ್ಯ ಸ್ನೇಹ ಬಳಗ, ಸಹದ್ಯೋಗಿಗಳು ಸಂತಸ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿರುತ್ತಾರೆ.

Prajavikshane

Chandru R Bhanapaur

Leave a Reply

error: Content is protected !!