You are currently viewing LOCAL NEWS : ಕುಕನೂರು|ರಮಾಬಾಯಿ ಪ್ರೌಢ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ‘ದತ್ತಿ ಉಪನ್ಯಾಸ ಕಾರ್ಯಕ್ರಮ’

LOCAL NEWS : ಕುಕನೂರು|ರಮಾಬಾಯಿ ಪ್ರೌಢ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ‘ದತ್ತಿ ಉಪನ್ಯಾಸ ಕಾರ್ಯಕ್ರಮ’

LOCAL NEWS : ಕುಕನೂರು|ರಮಾಬಾಯಿ ಪ್ರೌಢ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ‘ದತ್ತಿ ಉಪನ್ಯಾಸ ಕಾರ್ಯಕ್ರಮ’

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು ಮಾ.9 : ಪಟ್ಟಣದ ಶ್ರೀಮತಿ ರಾಮಬಾಯಿ ಅಂಬೇಡ್ಕರ್ ಬಾಲಕಿಯರ ಪ್ರೌಢಶಾಲೆಯಲ್ಲಿ ಇಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಕುಕನೂರು ಇವರಿಂದ ಶಾಂತಾಬಾಯಿ ರಂಗನಾಥರ ನಿಡಗುಂದಿ ಹಾಗೂ ಶಂಕ್ರಪ್ಪ ಸಿದ್ದಪ್ಪ ಜಮಖಂಡಿ ಇವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನಿವೃತ್ತ ಶಿಕ್ಷಕ ಶರಣಪ್ಪ ಮಾತನಾಡಿ, ‘ಕನ್ನಡ ನಾಡು ನುಡಿ ಜಲ ನೆಲ ಅಭಿವೃದ್ಧಿಗೆ ಕನ್ನಡ ಪರ ಕಾರ್ಯಕ್ರಮಗಳು ಪೂರಕವಾಗಿದ್ದು, ಮಹಾರಾಷ್ಟ್ರದಿಂದ ಬೆಳಗಾವಿ ಗಡಿಯಲ್ಲಿ ಇಂದಿಗೂ ಸಹ ತಂಟೆ ತಕರಾರು ಜರುಗುತ್ತಿದ್ದು, ಕನ್ನಡಿಗರಲ್ಲ ಒಂದಾಗಿ ಒಗಟ್ಟು ತೋರಿದಾಗ ಮಾತ್ರ ಪರರಾಜ್ಯಗಳಿಂದ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯಬಹುದು ಎಂದು ಹೇಳಿದರು.

‘ವಿದ್ಯಾರ್ಥಿಗಳು ತಲೆತಗ್ಗಿಸಿ ಮೊಬೈಲ್ ಗಳಲ್ಲಿ ತಲ್ಲೀನರಾಗುವ ಬದಲು, ಪುಸ್ತಕವನ್ನು ತಲೆತಗ್ಗಿಸಿ ಓದಿದಾಗ ಜೀವನದ ಉದ್ದಕ್ಕೂ ತಲೆ ಎತ್ತಿಕೊಂಡು ಓಡಾಡಲು ಸಾಧ್ಯ’ ಎಂದು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯ ಅಮರಪ್ಪ ಶಿವಾರೆಡ್ಡಿ ಮಾತನಾಡಿ, ‘ಕನ್ನಡ ಭಾಷೆಯ ಉಳಿವಿಗಾಗಿ ಎಲ್ಲರ ಸಹಕಾರ ಅಗತ್ಯವಾಗಿದ್ದು, ಭವನೇಶ್ವರಿಯ ರಥವು ಸುಗಮವಾಗಿ ಸಾಗಲು ಕನ್ನಡ ಅಭಿಮಾನಿಗಳು ಒಂದಾಗುವ ಅವಶ್ಯಕತೆ ಇದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಅಂಕಿ ಸಂಖ್ಯೆ ಹಾಗೂ ಭಾಷಾಜ್ಞಾನದ ಕೊರತೆ ಹೆಚ್ಚಾಗಿ ಕಂಡುಬರುತ್ತಿದ್ದು, ಕನ್ನಡ ಅಂಕಿ ಸಂಖ್ಯೆಯನ್ನು ಮತ್ತು ಭಾಷೆಯನ್ನು ಪ್ರೀತಿಸಿ ಹಾಗೂ ಕನ್ನಡ ಪ್ರೇಮ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿದೆ ಕನ್ನಡಕ್ಕಾಗಿ ಸದಾ ಕ್ರಿಯಾಶೀಲರಾಗಿ ದುಡಿಯೋಣ ಎಂದು ಕರೆ ನೀಡಿದರು.

ಕುಕನೂರು ಸಾಹಿತ್ಯ ಪರಿಷತ್ತಿನ ತಾಲೂಕ ಘಟಕದ ಅಧ್ಯಕ್ಷ ಕಳಕಪ್ಪ ಕುಂಬಾರ ವೇದಿಕೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಆರ್ ಪಿ ರಾಜುರ, ಲಕ್ಷ್ಮವ್ವ ಕಾಳಿ, ರುದ್ರಪ್ಪ ಭಂಡಾರಿ, ಚಂದ್ರು ಭಾನಾಪುರ, ಅಶೋಕ್ ಮಾದೀನೂರು, ಪೀರ್ ಸಾಬ್ ದಫೆದಾರ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Prajavikshane

Chandru R Bhanapaur

Leave a Reply

error: Content is protected !!