You are currently viewing LOCAL NEWS : ರಾಜ್ಯ ಬಜೆಟ್ ನಲ್ಲಿ ಅವಳಿ ತಾಲೂಕಿಗೆ ವಿಶೇಷ ಅನುದಾನ : ಶಾಸಕ ಹಾಗೂ ಸಿಎಂಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ಮುಖಂಡರು!

LOCAL NEWS : ರಾಜ್ಯ ಬಜೆಟ್ ನಲ್ಲಿ ಅವಳಿ ತಾಲೂಕಿಗೆ ವಿಶೇಷ ಅನುದಾನ : ಶಾಸಕ ಹಾಗೂ ಸಿಎಂಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ಮುಖಂಡರು!

LOCAL NEWS : ರಾಜ್ಯ ಬಜೆಟ್ ನಲ್ಲಿ ಅವಳಿ ತಾಲೂಕಿಗೆ ವಿಶೇಷ ಅನುದಾನ : ಶಾಸಕ ಹಾಗೂ ಸಿಎಂಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ಮುಖಂಡರು!

 ಪ್ರಜಾ ವೀಕ್ಷಣೆ ಡಿಜಿಟಲ್ ಮಾಧ್ಯಮ:

ಕುಕನೂರು ಮಾ. 09 : ‘ಇತ್ತೀಚಿಗೆ ಮಂಡನೆಯಾದ ರಾಜ್ಯ ಬಜೆಟ್ ನಲ್ಲಿ ಅವಳಿ ತಾಲೂಕಿಗೆ ವಿವಿಧ ಕಾಮಗಾರಿಗಳು ಅನುಮೋದನೆಗೊಂಡಿದ್ದು, ಕುಡಿಯುವ ನೀರು, ನೀರಾವರಿ, ಶಿಕ್ಷಣ, ಮೂಲಸೌಕರ್ಯ, ರಸ್ತೆ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅನುದಾನ ನೀಡಿದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಯಂಕಣ್ಣ ಯಾರಾಶಿ ತಿಳಿಸಿದರು.

ಈ ಕುರಿತು ಸೋಮವಾರ (ಮಾ. 09) ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕುಕನೂರು ತಾಲೂಕಿನ 20 ಗ್ರಾಮಗಳು ಹಾಗೂ ಯಲಬುರ್ಗಾ ತಾಲೂಕಿನ 3 ಗ್ರಾಮಗಳಿಗೆ “ಬಹು ಗ್ರಾಮ ಕುಡಿಯುವ ನೀರಿನ ಯೋಜನೆ” ಬರೋಬ್ಬರಿ 125 ಕೋಟಿ ರೂ.ಗಳ ವೆಚ್ಚದಲ್ಲಿ ಈ ಕಾಮಗಾರಿಯನ್ನ ಅನುಷ್ಠಾನ ಮಾಡಲಾಗಿದೆ. ಇದಕ್ಕೆಲ್ಲಾ ಕಾರಣಭೂತರಾದ ಶಾಸಕ ಬಸರಾಜರ ರೆಡಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ತಿಳಿಸುವುದಕ್ಕಾಗಿ ಇದೇ ಮಾರ್ಚ್ 16ರಂದು ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿಗೆ ಭೇಟಿ ನೀಡಿ, ಮಹಿಳಾ ಪ್ರತಿನಿಧಿಗಳೊಂದಿಗೆ ಧನ್ಯವಾದ ಸಮರ್ಪಣೆ ಮಾಡಲಿದ್ದೇವೆ’ ಎಂದು ಹೇಳಿದರು.

‘ಕುಕುನೂರು ತಾಲೂಕಿನ ಪಟ್ಟಣದಲ್ಲಿ ತಾಲೂಕ ಕ್ರೀಡಾಂಗಣದ ನಿರ್ಮಾಣ, ಮ್ಯಾದನೆರಿ ಕ್ರಾಸ್ ಕಾತ್ರಳ ಕ್ರಾಸ್ ವರಗೆ ರಸ್ತೆ ಅಭಿವೃದ್ಧಿ, ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ವ್ಯಾಪ್ತಿಯಲ್ಲಿ ಅಂತರ್ಜಾಲ ಮಟ್ಟ ಹೆಚ್ಚಿಸಲು 25 ಕೋಟಿ ರೂ ಅನುದಾನದಲ್ಲಿ ಕೆರೆಗಳ ಅಭಿವೃದ್ಧಿ, ಬೇವೂರು ಗ್ರಾಮದಲ್ಲಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜು ಮಂಜೂರಾತಿ ಮತ್ತು 18 ಕೋಟಿಗಳ ಕಟ್ಟಡ ಮಂಜೂರಾತಿ ಮಾಡಲಾಗಿದೆ. ತಾಲೂಕಿನ ಏಕಸ್ ಆಟಿಕೆ ಕಾರ್ಖಾನೆ ಹತ್ತಿರ 30 ಕೋಟಿ ವೆಚ್ಚದಲ್ಲಿ ಜಿಟಿಟಿಸಿ ಆರಂಭವಾಗಲಿದೆ’ ಎಂದು ಬ್ಲಾಕ್ ಕಾಂಗ್ರೆಸ್ ಕುಕನೂರು ಅಧ್ಯಕ್ಷ ಹನುಮಂತ್ ಗೌಡ ಚಂಡೂರು ತಿಳಿಸಿದರು.

ಈ ಸಂದರ್ಭದಲ್ಲಿ ಸತ್ಯನಾರಾಯಣಪ್ಪ ಹರಪನಹಳ್ಳಿ, ಮಂಜುನಾಥ್ ಕಡೆಮಾನಿ, ರಹೇಮನ್ ಸಾಬ್ ಮಕ್ಕಪ್ಪನವರ್, ಸುಭಾಸ್, ಬಸುವರಾಜ ಮುತ್ತಳ್, ಸಂಗಮೇಶ ಗುತ್ತಿ, ಇನ್ನಿತರ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

Leave a Reply

error: Content is protected !!