ಮುದಗಲ್ ವರದಿ..
ಸಚಿವ ಮಲ್ಲಿಕಾರ್ಜುನ ಕ್ಷಮೆ ಕೇಳಲು ಒತ್ತಾಯ..
ಮುದಗಲ್ಲ :- ಸಚಿವ ಜಮೀರ್ ಅಹ್ಮದ್ ಖಾನ್ ರವರ ಬಗ್ಗೆ ಏಕವಚನದಲ್ಲಿ ಮಾತನಾಡಿದ ಸಚಿವ ಎಸ್, ಎಸ್ ಮಲ್ಲಿಕಾರ್ಜುನ ಕ್ಷಮೆ ಕೇಳಬೇಕು ಎಂದು ರಾಹುಲ್ ಗಾಂಧಿ ಯುವ ಬ್ರಿಗೇಡ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್, ಆರ್ ರಸೂಲ್ ಒತ್ತಾಯ ಮಾಡಿದರು.

ಬುಧವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಶಿಸಿ ಮಾತನಾಡಿ ಅವರು ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳಿವದರಲ್ಲಿ ಯಾವುದೇ ತಪ್ಪು ಇಲ್ಲ ಕೊಡುವದು ಬಿಡುವದು ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಬಿಟ್ಟಿದ್ದು ಆದರೆ ಸಚಿವ ಎಸ್, ಎಸ್ ಮಲ್ಲಿಕಾರ್ಜುನ ರವರು ಜಮೀರ್ ಅಹ್ಮದ್ ಖಾನ್ ಬಗ್ಗೆ ಏಕವಚನದಲ್ಲಿ ಮಾತನಾಡಿರುವದು ಖಂಡನೀಯವಾಗಿದೆ ಈ ಕೂಡಲೆ ಕ್ಷಮೆ ಯಾಚಿಸಬೇಕೆಂದು ಒತ್ತಾಯ ಮಾಡಿದರು

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಅಜ್ಮಿರ್ ಬೆಳ್ಳಿಕಟ್, ಕಾಂಗ್ರೆಸ್ ಪಕ್ಷದ ಯುವ ಘಟಕ ಅಧ್ಯಕ್ಷ ಅಬ್ದುಲ್ ಖದೀರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಸೇನಬಾಷಾ, ಹಸನಅಲಿ ಕವ್ವ,ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯ ನ್ಯಾಮತ್ ಖಾದ್ರಿ, ಸೇರಿದಂತೆ ಮುಂತಾದವರು ಇದ್ದರು
ವರದಿ:- ಮಂಜುನಾಥ ಕುಂಬಾರ
