You are currently viewing ಮುದಗಲ್ಲ :- ವಂಶಾವಳಿ ಪ್ರಕ್ರಿಯೆಗೆ ₹8 ಸಾವಿರ ಲಂಚ ಆರೋಪ: ನಾಡ ಕಚೇರಿಯಲ್ಲಿ ವಾಗ್ವಾದ, ರಾಜಿ ವಿಫಲ

ಮುದಗಲ್ಲ :- ವಂಶಾವಳಿ ಪ್ರಕ್ರಿಯೆಗೆ ₹8 ಸಾವಿರ ಲಂಚ ಆರೋಪ: ನಾಡ ಕಚೇರಿಯಲ್ಲಿ ವಾಗ್ವಾದ, ರಾಜಿ ವಿಫಲ

ಮುದಗಲ್ ವರದಿ..

ವಂಶಾವಳಿ ಪ್ರಕ್ರಿಯೆಗೆ ₹8 ಸಾವಿರ ಲಂಚ ಆರೋಪ: ನಾಡ ಕಚೇರಿಯಲ್ಲಿ ವಾಗ್ವಾದ, ರಾಜಿ ವಿಫಲ..

ಮುದಗಲ್ ಪಟ್ಟಣ ಸಮೀಪದ ಕನ ಸಾವಿ ಗ್ರಾಮದಲ್ಲಿ ವಂಶಾವಳಿ ಪ್ರಮಾಣ ಪತ್ರ ಪಡೆಯಲು ₹8 ಸಾವಿರ ಲಂಚ ಕೇಳಲಾಗಿದೆ ಎಂಬ ಆರೋಪದ ಹಿನ್ನೆಲೆ ನಾಡ ಕಚೇರಿಯಲ್ಲಿ ರೈತ ಮತ್ತು ಗ್ರಾಮ ಆಡಳಿತಾಧಿಕಾರಿ ನಡುವೆ ತೀವ್ರ ವಾಗ್ವಾದ ನಡೆದಿದೆ.

ಕನಸಾವಿ ಗ್ರಾಮದ ರೈತ ರಾಮನಗೌಡ ಹನುಮಗೌಡ ಅವರು, ಗ್ರಾಮ ಆಡಳಿ ತಾಧಿಕಾರಿ ಶಿವಪ್ಪ ಅವರು ವಂಶಾವಳಿ ಮಾಡಿಕೊಡುವುದಕ್ಕಾಗಿ ₹8 ಸಾವಿರ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು. ಆರಂಭದಲ್ಲಿ ವಂಶಾವಳಿಗೆ ಅರ್ಜಿ ಸಲ್ಲಿಸುವ ವಿಧಾನ ಕುರಿತು ಮಾಹಿತಿ ಕೇಳಿದಾಗ, “₹8 ಸಾವಿರ ಕೊಟ್ಟರೆ ಕೆಲಸ ಮಾಡುತ್ತೇನೆ” ಎಂದು ಭರವಸೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ.

ಅವರ ಪ್ರಕಾರ, ಹಣ ನೀಡಿದ ಬಳಿಕ ಮೂರು ಬಾರಿ ಬಾಂಡ್ ಸಹಿತ ಅರ್ಜಿ ಸಲ್ಲಿಸಿದ್ದರೂ ವಂಶಾವಳಿ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಬಳಿಕ ನಾಲ್ಕನೇ ಬಾರಿ ಅರ್ಜಿ ಸಲ್ಲಿಸಿ ವಿಚಾರಿಸಿದಾಗ, “ಮೇಲಾಧಿಕಾರಿಗಳಿಗೆ ಕೊಡಬೇಕಿದೆ. ಇನ್ನೂ ₹2000 ಎಂದು ಒತ್ತಡ ಹಾಕಲಾಗಿದೆ ಎಂದು ಎರಡು ಸಾವಿರ ನೀಡಿ” ರಾಮನಗೌಡ ದೂರಿದ್ದಾರೆ. ಈ ಹಿನ್ನೆಲೆ, ಲಿಂಗಸುಗೂರು ತಹಶೀಲ್ದಾರರು ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಇನ್ನೊಂದೆಡೆ, ಗ್ರಾಮ ಆಡಳಿತಾಧಿಕಾರಿ ಶಿವಪ್ಪ ಅವರು ಲಂಚ ಪಡೆದಿರುವುದನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, “ಯಾವುದೇ ಹಣ ಪಡೆದಿಲ್ಲ: ದಾಖಲೆ ಇದ್ದರೆ ನೀಡಲಿ” ಎಂದು ಪ್ರತಿಕ್ರಿಯಿಸಿದ್ದಾರೆ. ಈ ವಿಚಾರವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಲಿಂಗಸುಗೂರು ಘಟಕದ ಅಧ್ಯಕ್ಷ ಶರಣಪ್ಪ ಕಟ್ಟಿಮನಿ ಅವರು ಮಧ್ಯಸ್ಥಿಕೆ ವಹಿಸಿ ರಾಜಿ ಸಂಧಾನಕ್ಕೆ ಪ್ರಯತ್ನಿಸಿದರೂ, ಎರಡೂ ಪಕ್ಷಗಳು ತಮ್ಮ ತಮ್ಮ ನಿಲುವುಗಳನ್ನು ಬದಲಿಸದ ಹಿನ್ನೆಲೆಯಲ್ಲಿ ಮಾತುಕತೆ ವಿಫಲವಾಗಿದೆ.

“ಲಂಚ ಆರೋಪದ ಕುರಿತು ತಕ್ಷಣ ಮೇಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ, ನೊಂದ ರೈತನಿಗೆ ನ್ಯಾಯ ಒದಗಿಸಬೇಕು” ಎಂದು ಶರಣಪ್ಪ ಕಟ್ಟಿಮನಿ ಆಗ್ರಹಿಸಿದ್ದಾರೆ.

ವರದಿ:-ಮಂಜುನಾಥ ಕುಂಬಾರ

 

 

Prajavikshane

Chandru R Bhanapaur

Leave a Reply

error: Content is protected !!